ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 17ನೇ ಸೀಸನ್ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿತು. ಈ ಸೀಸನ್ನಲ್ಲಿ ದಾಖಲೆಗಳ ಮೇಲೆ ದಾಖಲೆಗಳು ಮುರಿದಿವೆ. ರನ್‌ಗಳ ಸುರಿಮಳೆಯಿಂದಾಗಿ ಬ್ಯಾಟರ್‌ಗಳು ವಿಶ್ವದಾಖಲೆಗಳನ್ನು ರಚಿಸಿದರು. ಈ ಸೀಸನ್ 17 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಅಪರೂಪದ ಸಾಧನೆ ಬರೆದಿದೆ. ಇಷ್ಟು ಸೀಸನ್ನಲ್ಲಿ ಈ ಸಾಧನೆ ದಾಖಲಾಗಿರುವುದು ಇದೇ ಮೊದಲು. ಅಷ್ಟಕ್ಕೂ ಆ ದಾಖಲೆ ಏನು? ಎಂಬುದನ್ನು ನಾವೀಗ ತಿಳಿಯೋಣ.

17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ 2024ರ ಸೀಸನ್ ಇತಿಹಾಸ ಸೃಷ್ಟಿಸಿದೆ. ಶತಕಗಳ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಹಿಂದಿನ ಯಾವುದೇ ಸೀಸನ್ನಲ್ಲಿ ಇಷ್ಟೊಂದು ಶತಕಗಳು ದಾಖಲಾಗಿರಲಿಲ್ಲ. ಈ ಸೀಸನ್ನಲ್ಲಿ ದಾಖಲೆಯ 14 ಶತಕಗಳು ಬಂದಿವೆ. ಈ ಮೂಲಕ ಐಪಿಎಲ್-2024 ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸೀಸನ್ ಆಯಿತು. 2023ರ ಸೀಸನ್ನಲ್ಲಿ 12 ಶತಕಗಳು ಸಿಡಿದಿದ್ದವು. ಆ ದಾಖಲೆಯನ್ನು ಈ ಸೀಸನ್ ಮುರಿದಿದೆ.
ವಿವಿಧ ಫ್ರಾಂಚೈಸಿಗಳ ಪರವಾಗಿ 13 ಆಟಗಾರರು ಶತಕ ಗಳಿಸಿದ್ದಾರೆ. ಇದರಲ್ಲಿ ಜಾಸ್ ಬಟ್ಲರ್ ರಾಜಸ್ಥಾನ ರಾಯಲ್ಸ್ ಪತ ಎರಡು ಶತಕ ಗಳಿಸಿದ್ದಾರೆ. ಮಾರ್ಕಸ್ ಸ್ಟೊಯಿನಿಸ್ ಈ ಸೀಸನ್ನಲ್ಲಿ ಮೊದಲ ಶತಕ ಗಳಿಸಿದ ಆಟಗಾರ ಎನಿಸಿಕೊಂಡರು. ಅವರು ಲಖನೌ ತಂಡವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದರು. ವೇಗದ ಶತಕವನ್ನು ವಿಲ್ ಜಾಕ್ಸ್ ಮತ್ತು ಟ್ರಾವಿಸ್ ಹೆಡ್ ಜಂಟಿಯಾಗಿ ನೋಂದಾಯಿಸಿದ್ದಾರೆ. ಅವರು 41 ಎಸೆತಗಳಲ್ಲಿ ಶತಕ ಗಳಿಸಿದರು. ಇನ್ನು ಆರ್ಸಿಬಿ ಆಟಗಾರ ವಿರಾಟ್ ಕೊಹ್ಲಿ ಅವರು ಏಪ್ರಿಲ್ 6 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 72 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿದರು.
ಐಪಿಎಲ್-2024ರಲ್ಲಿ ಶತಕ ಬಾರಿಸಿದ ಆಟಗಾರರು
ಮಾರ್ಕಸ್ ಸ್ಟೊಯಿನಿಸ್, ವಿರಾಟ್ ಕೊಹ್ಲಿ, ಸುನಿಲ್ ನಾರಾಯಣ್, ಜಾನಿ ಬೈರ್‌ಸ್ಟೋವ್, ರುತುರಾಜ್ ಗಾಯಕ್ವಾಡ್, ಜಾಸ್ ಬಟ್ಲರ್ (ಎರಡು ಶತಕ), ರೋಹಿತ್ ಶರ್ಮ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸಾಯಿ ಸುದರ್ಶನ್, ಸೂರ್ಯಕುಮಾರ್ ಯಾದವ್, ಟ್ರಾವಿಸ್ ಹೆಡ್ ಮತ್ತು ವಿಲ್ ಜಾಕ್ಸ್. (ಏಜೆನ್ಸೀಸ್)
ಮಹಾ ವಂಚನೆ: ಮಂಜುಮ್ಮೇಲ್ ಬಾಯ್ಸ್ ಸಿನಿ ತಂಡದ ಅಸಲಿಯತ್ತು ಪೊಲೀಸ್ ವರದಿಯಲ್ಲಿ ಬಯಲು!
ಸ್ಟಾರ್ಕ್ಗೆ 24.75 ಕೋಟಿ ನಿಮ್ಗೆ ಮಾತ್ರ 55 ಲಕ್ಷ ರೂ. ಏಕೆ? ರಿಂಕು ಕೊಟ್ಟ ಉತ್ತರಕ್ಕೆ ತಲೆಬಾಗಿತು ಕ್ರೀಡಾಜಗತ್ತು!