ರಾಮಮಂದಿರ ಭೂಮಿ ಪೂಜೆಗೆ ನಮ್ಮನ್ನೂ ಆಹ್ವಾನಿಸಿ ಎಂದ ಕಾಂಗ್ರೆಸ್​ ನಾಯಕ ಸಲ್ಮಾನ್ ಖುರ್ಷಿದ್​

Slaman Khurshd
Published on

ಅಯೋಧ್ಯೆ: ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ದಿನ ಹತ್ತಿರ ಬರುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರು ಈ ಬಗ್ಗೆ ಮಾತನಾಡುತ್ತಿರುವುದೂ ಹೆಚ್ಚುತ್ತಿದೆ.

ನಿನ್ನೆ ಅಸಾದುದ್ದೀನ್​ ಓವೈಸಿ ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಬಾರದು ಎಂದಿದ್ದರು.

ಇಂದು ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಸಲ್ಮಾನ್​ ಖುರ್ಷಿದ್​ ಅವರು ಮತ್ತೊಂದು ಸಲಹೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಆಗಸ್ಟ್​ 5ರಂದು ನಡೆಯಲಿರುವ ಭೂಮಿ ಪೂಜೆಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಬೇಕು ಎಂದು ಸಲ್ಮಾನ್​ ಹೇಳಿದ್ದಾರೆ. ನಾವೆಲ್ಲರೂ ಒಂದಾಗಿ ರಾಮಮಂದಿರ ಭೂಮಿ ಪೂಜೆ ನಡೆಸಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿಗೆ ಓವೈಸಿ ನೀಡಿದ್ದಾರೊಂದು ಎಚ್ಚರಿಕೆ…!

ಹಾಗೇ, ಸಲ್ಮಾನ್​ ಖುರ್ಷಿದ್​ ಅವರ ಈ ಹೇಳಿಕೆಯ ವಿರುದ್ಧ ಎಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ಬಾಬ್ರಿ ಮಸೀದಿಯನ್ನು ಮತ್ತೆ ತೆರೆದವರು ರಾಜೀವ್​ ಗಾಂಧಿ. ಮಸೀದಿ ಧ್ವಂಸವಾದಾಗ ಪ್ರಧಾನಿಯಾಗಿದ್ದುಕೊಂಡು ವಿಷಯವನ್ನು ಪರಿಶೀಲನೆ ಮಾಡಿದವರ. ಬಾಬ್ರಿ ಮಸೀದಿ ಧ್ವಂಸದ ಸಮಯದಲ್ಲಿ ಕಾಂಗ್ರೆಸ್​ ಪಕ್ಷ ಸಂಘಪರಿವಾರದ ಕೈಗವಸು ಆಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net