ಘರ್​ ವಾಪ್ಸಿಗೆ ಮನಸ್ಸು ಮಾಡಿದವರಿಗೆ ಪರಂ ಫಸ್ಟ್​ ಬೆಂಚ್​ ಷರತ್ತು!

DR G Parameshwar
Published on

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಬಿಜೆಪಿ ಸೇರಿ ಸಚಿವರಾಗಿದ್ದವರನ್ನು ಪುನಃ ಪಕ್ಷಕ್ಕೆ ಸೆಳೆದುಕೊಳ್ಳುವ ಬಗ್ಗೆ ಕಾಂಗ್ರೆಸ್​ ಪಾಳಯದಲ್ಲಿ ಬಿರುಸಿನ ಚರ್ಚೆ ನಡೆದಿದೆ.

ಶಾಸಕರಾಗಿ ಇನ್ನೂ ಮೂರು ತಿಂಗಳು ಕೂಡ ಕಳೆದಿಲ್ಲ, ಆಗಲೇ ಬಿಜೆಪಿಗೆ ಗು್​ ಬೈ ಹೇಳಿ ಕಾಂಗ್ರೆಸ್​ಗೆ ಮರಳುತ್ತಾರೆಯೇ ಎಂಬ ಸೋಗಿದ ಪ್ರಶ್ನೆಯ ನಡುವೆಯೇ ಕೈ ನಾಯಕರು ಹೇಳಿಕೆಗಳನ್ನು ನೀಡಲಾರಂಭಿಸಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ ಈ ಬಗ್ಗೆ ಮಾತನಾಡಿದ್ದು, ಈ ಹಿಂದೆ ಪಕ್ಷ ಬಿಟ್ಟು ಹೋದೋರು ಬರಬಹುದು. ಪಕ್ಷ ಬಿಟ್ಟು ಹೋಗಿರುವವರು ವಾಪಸ್ ಬಂದಿರುವ ಉದಾಹರಣೆ ಇದೆ. ಆದರೆ ಅವರಿಗೆ ಫಸ್ಟ್ ಬೇಂಚ್ ಸಿಗೋದಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ತಪ್ಪು ಮಾಡಿದ್ದನ್ನ ಸರಿ ಮಾಡಿಕೊಳ್ಳುತ್ತೇವೆ ಎಂದು ಬರಬಹುದು. ಬರುವವರಿಗೆ ಫಸ್ಟ್ ಬೇಂಚ್ ಸಿಗದಿದ್ರೂ ಅವರಿಗೆ ಕ್ಲಾಸ್ ರೂಂಗೆ ಹೋಗಲು ಅವಕಾಶ ಇದೆ. ಅವರು ಮತ್ತೆ ಫಸ್ಟ್ ಬೆಂಚ್ ಸಿಗಬೇಕಾದರೆ ತುಂಬಾ ದಿನ ಆಗಲಿದೆ ಎಂದು ಸೂಚ್ಯವಾಗಿ ಹೇಳಿದರು.

ನನ್ನ ಜೊತೆ ಶಾಸಕರು ಚರ್ಚೆ ಮಾಡಿರುವ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಎಂದ ಅವರು ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಅಂತ ಹೇಳಿ ಶಾಸಕರು ಬರಬಹುದು. ಬಿಜೆಪಿಯಿಂದ ಬರುವ ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ. ಈಗಾಗಲೇ ಅಧ್ಯಕ್ಷರು ಈ ಬಗ್ಗೆ ಹೇಳಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net