ಬೇಲಿಂಗ್ ಯಂತ್ರಕ್ಕೆ ಚಾಲನೆ

yanthra
Published on

ಪೆರ್ಲ: ಎಣ್ಮಕಜೆ ಗ್ರಾಪಂ ಹಸಿರು ಕ್ರಿಯಾಸೇನೆ ಯೋಜನೆಯ ಎಂಸಿಎಫ್ ಕೇಂದ್ರದಲ್ಲಿ ಸ್ಥಾಪಿಸಿದ ಬೇಲಿಂಗ್ ಯಂತ್ರಕ್ಕೆ ಇತ್ತೀಚೆಗೆ ಚಾಲನೆ ನೀಡಲಾಯಿತು.

ಪಂಚಾಯಿತಿ ಆಡಳಿತ ಸಮಿತಿಯ ನೇತೃತ್ವದಲ್ಲಿ 5.75 ಲಕ್ಷ ರೂ. ವ್ಯಯಿಸಲಾಗಿದ್ದು, ಯಂತ್ರಕ್ಕೆ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಚಾಲನೆ ಮಾಡಿದರು. ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ. ಕುಲಾಲ್, ಸಹಾಯಕ ಕಾರ್ಯದರ್ಶಿ ಗಿರೀಶ್ ಸಿ, ವಿಇಒ ಡೇವಿ, ನವಾಸ್ ಮರ್ತ್ಯ, ಆಫೀದ್, ಹಸಿರು ಕ್ರಿಯಾಸೇನೆ ಸಮಿತಿಯ ಪದಾಧಿಕಾರಿಗಳಾದ ಉದಯ ಕುಮಾರಿ, ಭಾರತೀ ಬಲ್ತಕಲ್ಲು ಮತ್ತು ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net