ಆಚರಣೆಗಳ ಪರಿಚಯ ಸ್ತುತ್ಯರ್ಹ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮೆಚ್ಚುಗೆ

Ull_Kesard Onji dina
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಶೈಕ್ಷಣಿಕ, ಧಾರ್ಮಿಕ, ಸಾವಾಜಿಕ ಕಾರ್ಯಕ್ರಮ ಮೂಲಕ ಸದಾ ಕ್ರಿಯಾಶೀಲವಾಗಿರುವ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂ ವರ್ಷಕ್ಕೊಮ್ಮೆ ಕೆಸರು ಗದ್ದೆಯಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಹಿಂದಿನ ಕಾಲದ ಆಚರಣೆ ಯುವಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂದ ವತಿಯಿಂದ ಕೊಣಾಜೆ ಗ್ರಾಮ ಸಮಿತಿ, ಮಹಿಳಾ ಸಮಿತಿ ಮತ್ತು ಯುವಟಕದ ಸಹಕಾರದಲ್ಲಿ ಸಂದ 44ನೇ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಕೊಣಾಜೆ ಗ್ರಾಮದ ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಭಂಡಾರಮನೆಯ ಎದುರಿನ ಅಂಬಡೆವಾರ್ ಗದ್ದೆಯಲ್ಲಿ ನಡೆದ ಬೊಲ್ಮದ ‘ಕಂಡೊಡೊಂಜಿ ದಿನ’ ಕೆಸರುಗದ್ದೆ ಕ್ರೀಡಾಕೂಟ ಉದ್ಘಾಟಿಸಿ ವಾತನಾಡಿದರು.

ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕ ಸುದರ್ಶನ ರಾವ್ ವಾತನಾಡಿ, ಹಿಂದೆ ಕೆಸರು ಗದ್ದೆಗೆ ಇಳಿಯದವರು ವಿರಳವಾಗಿದ್ದರೆ ಇಂದು ಇಳಿಯುವವರೇ ಇಲ್ಲ. ಈ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ನಿರಂತರ ನಡೆಯಬೇಕು ಎಂದರು.

ಅತಿಥಿಗಳು ಕೆಸರು ಗದ್ದೆಗೆ ಹಾಲು ಎರೆದರೆ, ಶರೀಫ್ ಸಾಹೇಬ್ ಮತ್ತು ಇಸ್ಮಾಯಿಲ್ ಕನಕೂರು ಅವರು ಕಂಬಳದ ಕೋಣಗಳನ್ನು ಗದ್ದೆಯಲ್ಲಿ ಓಡಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಗದ್ದೆಯ ವಾಲೀಕರಾದ ವಿಮಲಾ ಮತ್ತು ಮುದರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ದೇವದಾಸ್ ಶೆಟ್ಟಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂದ ಅಧ್ಯಕ್ಷ ರವೀಂದ್ರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಪ್ರಸಾದ್ ರೈ ಕಲ್ಲಿವಾರ್, ಶ್ರೀ ಅರಸು ಮುಂಡಿತ್ತಾಯ ದೈವಸ್ಥಾನದ ಪಾತ್ರಿ ಐತಪ್ಪ ಪೂಜಾರಿ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಡಿ.ಕುಂದರ್, ವಾಜಿ ಅಧ್ಯಕ್ಷ ರಾಜಾರಾಮ ರೈ ಹೊಸಮನೆ, ತೊಕ್ಕೊಟ್ಟು ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷೆ ಗಂಗಾ ಆನಂದ ಅಸೈಗೋಳಿ, ಪದ್ಮಶಾಲಿ ಸೇವಾ ಸವಾಜದ ಅಧ್ಯಕ್ಷ ರಾಮಚಂದ್ರ ಪದ್ಮಶಾಲಿ, ಇನೋಳಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮೊಕ್ತೇಸರ ಗೋಪಾಲ ಶೆಟ್ಟಿ ಇನೋಳಿ ಬಾರ್ಲ, ಸಪ್ತಸ್ವರ ಕಲಾತಂಡದ ಅಧ್ಯಕ್ಷ ರಿತೇಶ್ ಶೆಟ್ಟಿ, ಸೇವಾ ಟ್ರಸ್ಟ್ ಅಧ್ಯಕ್ಷ ಸುರೇಂದ್ರ ಬೊಳ್ಳೆಕುಮೇರು, ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಭುಜಂಗ ಗಟ್ಟಿ, ಸುಂದರ ಕೋಟ್ಯಾನ್, ಕ್ರೀಡಾ ಕಾರ್ಯದರ್ಶಿ ವೇಣುಗೋಪಾಲ ಪಾವೂರು ಮೊದಲಾದವರಿದ್ದರು.

ಸಂದ ಕಾರ್ಯದರ್ಶಿ ಸುಭಾಷ್ ಬೋಳಿಯಾರ್ ಸ್ವಾಗತಿಸಿದರು. ಸುರೇಖಾ ಎಚ್.ಪೂಜಾರಿ ನಿರೂಪಿಸಿದರು. ಅಜಿತ್ ಪೂಜಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net