

ನ್ಯೂಯಾರ್ಕ್: ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ 1948 ರಿಂದ ಬಳಿಕ ಈ ಪರಿ ಮಳೆ ಬಿದ್ದಿರುವುದು ಇದೇ ಮೊದಲು. ಹೀಗಾಗಿ ದಾಖಲೆಯ ಮಳೆಯಾಗಿದೆ. ಚಂಡಮಾರುತದ ತೀವ್ರತೆ ಹೇಗಿತ್ತು ಎಂದರೆ ಬ್ರೂಕ್ಲಿನ್ ನಗರದಲ್ಲಿ ಒಂದು ತಿಂಗಳಿನಲ್ಲಿ ಸುರಿಯುವಷ್ಟು ಮಳೆ ಕೇವಲ ಮೂರು ಗಂಟೆಗಳಲ್ಲಿ ಸುರಿದಿದೆ.
ನ್ಯೂಯಾರ್ಕ್ ನಗರದ ಜಲಾವೃತ ಬೀದಿಗಳ ನಡುವೆ ವ್ಯಕ್ತಿಯೊಬ್ಬ ತನ್ನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ನಿರ್ಧರಿಸಿದ್ದಾನೆ. ಈ ಶಾಕಿಂಗ್ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದ್ದು, ಈತ ಯಾಕೆ ಹೀಗೆ ಮಾಡುತ್ತಿದ್ದಾನೆ. ಈತನಿಗೆ ಪ್ರವಾಹದ ಭೀತಿಯೇ ಇಲ್ವಾ ಅಂತಾ ಪ್ರಶ್ನೆ ಮಾಡಿದ್ದಾರೆ.
ಈತ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ಚಿಂತನೆ ಸರಿಯೇ. ಆದರೆ ಇಂತಹ ಪ್ರವಾಹದ ಪರಿಸ್ಥಿತಿಯಲ್ಲಿ ಈ ರೀತಿ ಯಾವುದೇ ಸುರಕ್ಷತೆ ಇಲ್ಲದೆ ನೀರಿನ ಮಧ್ಯೆ ನಾಯಿಯನ್ನು ಕೊಂಡೊಯ್ಯುತ್ತಿದ್ದಾನೆ. ನಾಯಿಯ ಮುಖದವರೆಗೂ ನೀರು ನಿಂತಿದ್ದು, ಇಂತಹ ಸಂದರ್ಭದಲ್ಲಿ ಹೊರಗಡೆ ಹೋಗೋದು ಇಬ್ಬರಿಗೂ ಸೇಫ್ ಅಲ್ಲ ಎಂದು ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರವಾಹ ಮನುಷ್ಯರಿಗೆ ಮಾತ್ರವಲ್ಲ ಸಾಕುಪ್ರಾಣಿಗಳಿಗೂ ಅಪಾಯವನ್ನುಂಟು ಮಾಡುತ್ತದೆ. ಭಾರೀ ಮಳೆಯ ನಡುವೆ, ನ್ಯೂಯಾರ್ಕ್ ಗವರ್ನರ್, ಕ್ಯಾಥಿ ಹೊಚುಲ್ ಪ್ರವಾಹದ ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ನ್ಯೂಯಾರ್ಕ್ ನಗರ, ಲಾಂಗ್ ಐಲ್ಯಾಂಡ್ ಮತ್ತು ಹಡ್ಸನ್ ವ್ಯಾಲಿಯಲ್ಲಿ ತುರ್ತು ಪರಿಸ್ಥಿತಿಯನ್ನೂ ಘೋಷಿಸಿದ್ದಾರೆ. ಜೊತೆಗೆ ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗಾಗಿಯೇ ಸುರಕ್ಷತಾ ಪಡೆಗಳನ್ನೂ ನೇಮಿಸಲಾಗಿದೆ.
ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆರಾಯನ ಆರ್ಭಟಕ್ಕೆ ನ್ಯೂಯಾರ್ಕ್ ನಗರಿ ಮುಳುಗಡೆಯಾಗಿದ್ದು, ಇಂತಹ ಸಂದರ್ಭದಲ್ಲಿ ವ್ಯಕ್ತಿ ನಾಯಿಯನ್ನ ವಾಕಿಂಗ್ ಕರೆದುಕೊಂಡು ಹೋಗಿ ಬೇಜವಬ್ದಾರಿ ತೋರುತ್ತಿರುವುದನ್ನ ಜನರು ಪ್ರಶ್ನೆ ಮ,ಆಡಿದ್ದಾರೆ.