ಆತ್ರಾಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ

gan (16)
Published on

ಕುಂದಾಪುರ: ಆತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾ ಭಾರತಿ ಸಹಯೋಗದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಭಾರತಿ ಮಂಗಳೂರು ವಿಭಾಗದ ಸಂಯೋಜಕ ಲಿಂಗಯ್ಯ ಉಪ್ಪುಂದ ಯೋಗಾಸನ ತರಬೇತಿ ನೀಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿ, ರಾಷ್ಟ್ರೀಯ ಸ್ವಯಂ ಸೇವಕದ ಉಡುಪಿ ಜಿಲ್ಲಾ ಸಹ ಕಾರ್ಯವಾಹ ಪ್ರಶಾಂತ್ ಅರೆಶಿರೂರು ವಿದ್ಯಾರ್ಥಿಗಳಿಗೆ ಯೋಗ, ಸಂಸ್ಕಾರದ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೈಂದೂರು ತಾಲೂಕು ಕಾರ್ಯವಾಹ ಸಂದೀಪ್ ಕಂಚಿಕಾನ್, ಕ್ರೀಡಾ ಭಾರತಿಯ ಉಡುಪಿ ಜಿಲ್ಲೆ ಸದಸ್ಯ ಕೇಶವ್ ನಾಗೂರು ಯೋಗಾಸನ ತರಬೇತಿಯಲ್ಲಿ ಸಹಕರಿಸಿದರು.

ಸಂಸ್ಥೆ ಮುಖ್ಯಶಿಕ್ಷಕಿ ದೀಪಿಕಾ ಸುಭಾಸ್ ಸ್ವಾಗತಿಸಿದರು. ಗಮನ್ಯಾ ಶೆಟ್ಟಿ, ಅಂಕಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದೀಪ್ತಿ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net