ಕೋಟದಲ್ಲಿ ಪರಿಸರಸ್ನೇಹಿ ಸೀಮಂತ ಶಾಸ್ತ್ರ

kota (6)
Published on

ಕೋಟ: ಪಂಚವರ್ಣ ಯುವಕ, ಮಹಿಳಾ ಮಂಡಳಿ ವತಿಯಿಂದ ಮಹಿಳಾ ಮಂಡಲ ಸದಸ್ಯರ ಸೀಮಂತ ಕಾರ್ಯಕ್ರಮವನ್ನು ಶುಕ್ರವಾರ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಂಟು ತಿಂಗಳ ಗರ್ಭಿಣಿಯಾಗಿರುವ ಮಂಡಳಿ ಸದಸ್ಯೆ ಅಕ್ಷತಾ ಅವರು ಎಂಟು ವಿವಿಧ ಬಗೆಯ ಗಿಡಗಳನ್ನು ನೆಟ್ಟರು. ಈ ಪರಿಸರಸ್ನೇಹಿ ಸೀಮಂತಕ್ಕೆ ಹಿರಿಯ ಚಿತ್ರನಟ ಎಸ್.ದೊಡ್ಡಣ್ಣ ಪ್ರಶಂಸಿದ್ದಾರೆ.

ಅಕ್ಷತಾಳ ತಂದೆ ಪ್ರಭಾಕರ ಕಾಂಚನ್, ತಾಯಿ ಮೂಕಾಂಬಿಕಾ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಉಪಾಧ್ಯಕ್ಷೆ ಸುಜಾತ ಕುವಾರ್, ಪಂಚವರ್ಣದ ಕಾರ್ಯದರ್ಶಿ ನಿತಿನ್ ಕುವಾರ್, ಪಂಚವರ್ಣದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net