

ಶಿರ್ವ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟೇಷನಲ್ ಇಂಟೆಲಿಜೆನ್ಸ್, ಸ್ಮಾರ್ಟ್ ಕಮ್ಯುನಿಕೇಷನ್ ಮತ್ತು ಮೆಟೀರಿಯಲ್, ಎನರ್ಜಿ, ಎನ್ವಿರಾನ್ಮೆಂಟ್ ಹಾಗು ಮ್ಯಾನ್ಯುಫ್ಯಾಕ್ಚರಿಂಗ್ ವಿಷಯದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣದ ಸಮಾರೋಪ ಇತ್ತೀಚೆಗೆ ನಡೆಯಿತು.
ದೇಶ ವಿದೇಶಗಳಿಂದ 237 ಪ್ರಬಂಧಗಳು ಬಂದಿದ್ದು, 12 ಪ್ರಬಂಧಗಳನ್ನು ಆಯ್ಕೆ ಮಾಡಲಾಯಿತು. ಪ್ರಬಂಧ ಮಂಡನೆಯ ಜತೆಗೆ 6 ಹೆಸರಾಂತ ಸಂಶೋಧಕರಿಂದ ಆಧುನಿಕ ತಂತ್ರಜ್ಞಾನದ ಉಪನ್ಯಾಸ ಏರ್ಪಡಿಸಲಾಗಿತ್ತು.
ಮಣಿಪಾಲ್ ಡಾಟ್ ನೆಟ್ ಸಂಸ್ಥೆ ನಿರ್ದೇಶಕ ಡಾ.ಯುಸಿ ನಿರಂಜನ್ ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅತ್ಯುತ್ತಮ ಪ್ರಬಂಧ ಪುರಸ್ಕಾರವನ್ನು ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಘೋಷಿಸಿದರು. ರಸಾಯನ ಶಾಸ್ತ್ರ ವಿಭಾಗದ ಸ್ವಾತಿ ಪರಿಚಯಿಸಿದರು. ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಡಾ.ಶಿಲ್ಪಾ ಕಾಮತ್ ಸ್ವಾಗತಿಸಿದರು. ಅನಂತ್ ಮಲ್ಯ, ಸ್ತುತಿ ಕಾರ್ಯಕ್ರಮ ನಿರೂಪಿಸಿದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಸುನೀಲ್ ಹಲ್ದಾಂಕರ್ ವಂದಿಸಿದರು.