ಕೋಟ ಅಮೃತೇಶ್ವರೀ ಮೇಳ ಕಲಾವಿದರಿಗೆ ವಿಮಾ ಸೌಲಭ್ಯ

kota.me.31 vima swlabya
Published on

ಕೋಟ: ಕೋಟದ ಅಮೃತೇಶ್ವರೀ ದೇಗುಲ ಆಡಳಿತ ವತಿಯಿಂದ ನಡೆಸಲ್ಪಡುವ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಶುಕ್ರವಾರ ಕೊನೆಯ ತಿರುಗಾಟದ ಸೇವೆಯಾಟ ದೇಗುಲದಲ್ಲಿ ಸಂಪನ್ನಗೊಂಡಿತು.

ಈ ಹಿನ್ನೆಲೆಯಲ್ಲಿ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ.ಕುಂದರ್ ತಮ್ಮ ಮೇಳದ ಕಲಾವಿದರಿಗೆ ವಿಮಾ ಸೌಲಭ್ಯ ಕಾರ್ಡನ್ನು ಹಸ್ತಾಂತರಿಸಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಎಂ.ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಚಂದ್ರ ಆಚಾರ್, ಮೇಳದ ವ್ಯವಸ್ಥಾಪಕ ಕೋಟ ಸುರೇಶ್, ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯ, ಹಿರಿಯ ಕಲಾವಿದ ಜಗದೀಶ ಹೆಗಡೆ, ಮಾಧವ ನಾಗೂರು, ದೇಗುಲದ ವ್ಯವಸ್ಥಾಪಕ ಗಣೇಶ್ ಹೊಳ್ಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net