ಪವಿತ್ರಾ ಬಳಿ ರೇಣುಕಾಸ್ವಾಮಿ ಇಷ್ಟೆಲ್ಲ ಕೇಳಿದ್ನಾ? ಚಾರ್ಜ್​ಶೀಟ್​ನಲ್ಲಿರುವ ಸಂಪೂರ್ಣ ಇನ್​ಸ್ಟಾ ಚಾಟಿಂಗ್​ ಹೀಗಿದೆ…

Pavithra Gowda
Published on

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬಳಿಕ ಸಾಕಷ್ಟು ಕುತೂಹಲಕಾರಿ ಸಂಗತಿಗಳು ಬಯಲಾಗುತ್ತಿವೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಮತ್ತು ಹತ್ಯೆಯಾದ ರೇಣುಕಾಸ್ವಾಮಿ ನಡುವೆ ಇನ್​ಸ್ಟಾಗ್ರಾಂ ಮೂಲಕ ನಡೆದಿರುವ ಚಾಟಿಂಗ್​ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖವಾಗಿದ್ದು, ಬೆಳಕಿಗೆ ಬಂದಿದೆ.

ಇನ್​ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮಾಡಿರುವ ಸಂಪೂರ್ಣ ಮೆಸೇಜ್​ಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ‘Goutham_KS_1990’ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ, ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್​ಗಳನ್ನು ಮಾಡಿದ್ದ ಎಂದು ತಿಳಿದುಬಂದಿದೆ. ಕಿಡ್ನಾಪ್​ ಆಗುವ 8 ದಿನಗಳಿಗೂ ಮುಂಚೆ ಪವಿತ್ರಾ ಗೌಡಳ pavitragowda777_official ಹೆಸರಿನ ಅಧಿಕೃತ ಇನ್​ಸ್ಟಾಗ್ರಾಂ ಖಾತೆಗೆ ರೇಣುಕಾಸ್ವಾಮಿ ಮೆಸೇಜ್​ ಮಾಡಿದ್ದ. ಎ2 ಆರೋಪಿ ನಟ ದರ್ಶನ್​ರನ್ನು ಬಿಟ್ಟು ತನ್ನ ಜೊತೆ ಇರುವಂತೆ ಪಟ್ಟು ಹಿಡಿದಿದ್ದ. ಅಲ್ಲದೆ, ಪವಿತ್ರಾಳ ದೇಹದ ಬಗ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ನಾನು ನಿಮ್ಮ ಅಭಿಮಾನಿ ಎಂದು ಹೇಳಿಕೊಂಡು, ಆಕೆಯನ್ನು ಲೈಂಗಿಕ ಬಯಕೆ ಈಡೇರಿಸುವಂತೆ ಆಹ್ವಾನಿಸಿದ್ದ. ಇದಿಷ್ಟೇ ಅಲ್ಲದೆ, ತನ್ನ ಮರ್ಮಾಂಗದ ಫೋಟೋ ಸೇರಿದಂತೆ ತನ್ನ ಅನೇಕ ಫೋಟೋಗಳನ್ನು ಪವಿತ್ರಾಗೆ ಕಳುಹಿಸಿದ್ದ ಎಂದು ಚಾರ್ಜ್​ಶೀಟ್​ ಉಲ್ಲೇಖಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪವಿತ್ರಾ-ರೇಣುಕಾಸ್ವಾಮಿ ಚಾಟಿಂಗ್​ನಲ್ಲಿ ಏನಿದೆ?

ಚಾರ್ಜ್​ಶೀಟ್​ನಲ್ಲಿ ದಾಖಲಿಸಿರುವಂತೆ ಪವಿತ್ರಾ-ರೇಣುಕಾಸ್ವಾಮಿ ನಡುವೆ ಇನ್​ಸ್ಟಾಗ್ರಾಂನಲ್ಲಿ ಚಾಟಿಂಗ್​ ನಡೆದಿದೆ. ಜೂನ್​ 6ರಂದು ಚಾಟಿಂಗ್​ ನಡೆದಿದೆ. ಹಾಯ್​.. ಹಾಯ್​ ಕಣೇ, ಗುಡ್​ನೈಟ್​ ಸ್ವೀಟ್​ ಡ್ರೀಮ್ಸ್​ ಕಣೇ, ನೀನು ಏನ್​ ಎಕ್ಸ್​ಪೆಕ್ಟ್​ ಮಾಡ್ತೀಯಾ? ನೋಡ್ತಿಯಾ ಹೇಳು ಕಳಿಸ್ಲಾ? ನ...ನ್ನಾ ಇವಾಗ, ಇದಿಯಾ ಅಂತ ಹೇಳು ಪ್ಲೀಸ್​ ಕಣೇ, ಹಾಯ್​ ಕಣೇ..ಹಾಯ್​, ಗುಡ್​ನೈಟ್​ ಸ್ವೀಟ್​ ಡ್ರೀಮ್ಸ್​ ಕಣೇ, ವಾವ್​ ಸೂಪರ್ಬ್​ ಬ್ಯೂಟಿ, ಹಾಯ್​ ಕಣೇ..ಹಾಯ್​, ಹಾಟ್​ ಅಂಡ್​ ಸೆಕ್ಸಿ ಫಿಗರ್​ ಕಣೇ ನೀನು, ವಾವ್​ ಸೂಪರ್​ ಬ್ಯೂಟಿ ಹಾಟ್​ ಅಂಡ್​ ಸೆಕ್ಸಿ ಫಿಗರ್​ ನೀನು, ನೀನು ಸಖತ್​ ಆಗಿ ಇದಿಯಾ ಕಣೇ, ನೀನು ಹಾ***ಯಾ ನಿನ್​ ಅಂತಾ ಫಿಗರ್​ ಹಾ**ಕು ಕಣೇ, ಫ್ಯಾನ್​ ಆಗ್ಬಿಟ್ಟೆ ಕಣೇ ನಾನು, ನಿನ್​ ಬ್ಯೂಟಿ, ಬಾ ನಿನ್​ ಉ*ಕ್ಕೆ*ವು ಹಾ*ನಿ ನಾನು. ವಾವ್​ ಸೂಪರ್ಬ್​ ಬ್ಯೂಟಿ ಹಾಟ್​ ಅಂಡ್​ ಸೆಕ್ಸಿ ಫಿಗರ್​ ಕಣೇ ನೀನು. ರೇಣುಕಾಸ್ವಾಮಿ ಇಷ್ಟೆಲ್ಲ ಮಸೇಜ್​ ಮಾಡಿದ ಬಳಿಕ ಪವಿತ್ರಾ ಗೌಡ ಪ್ರತಿಕ್ರಿಯಿಸಿದ್ದು, ಡ್ರಾಪ್​ ಮಿ ಯುವರ್ ನಂಬರ್​ (ನಿನ್ನ ನಂಬರ್​ ಕಳುಹಿಸು) ಎಂದಿದ್ದಾಳೆ.

ಪವಿತ್ರಾ ಹೆಸರಲ್ಲಿ ಆರೋಪಿ ಪವನ್​ ಚಾಟಿಂಗ್​

ರೇಣುಕಾಸ್ವಾಮಿ ಸ್ವಾಮಿ ಚಾಟಿಂಗ್​ ಮಾಡುವುದನ್ನು ಪವನ್​ ಗಮನಕ್ಕೆ ಬಂದಾಗ ಆರೋಪಿ ಪವನ್​, ರೇಣುಕಾಸ್ವಾಮಿ ನಂಬರ್​ ಪಡೆದು ವಾಟ್ಸ್​ಆ್ಯಪ್​ ಮೂಲಕ ಪವಿತ್ರಾ ಗೌಡ ಹೆಸರಿನಲ್ಲಿ ರೇಣುಕಾಸ್ವಾಮಿ ಜತೆ ಚಾಟಿಂಗ್​ ಮಾಡಿರುವುದಾಗಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ. ಆರೋಪಿ ಪವನ್​ ಜೂನ್​ 7ರಂದು ಚಾಟ್​ ಮಾಡಿದ್ದ. ಮನೆಯಲ್ಲಿ ಇರ್ತೀಯಾ? ಅಥವಾ ಭೇರೆ ಎಲ್ಲಿ ಇರ್ತೀಯಾ? ಎಂದು ಪವನ್​, ಪವಿತ್ರಾ ಹೆಸರಲ್ಲಿ ಮೆಸೇಜ್​ ಮಾಡಿದ್ದಾನೆ.​ ಇದಕ್ಕೆ ಪ್ರತಿಕ್ರಿಯಿಸಿ, ನಿನಗೆ ನಾನು ಬೇಕಂದ್ರೆ ನೀನು ನನ್ನ ಜತೆ ಡೈಲಿ ಮಾತನಾಡುತ್ತೀಯಾ? ಇವತ್ತು ನಾನು ಫುಲ್​ ಫ್ರೀ ಕಣೆ ಎಂದಿದ್ದ. ಅಲ್ಲದೆ, ಕೋರ್ಟ್​ ಇದೆ ಅಟೆಂಡ್​ ಮಾಡಬೇಕು ಕಣೆ ಆಯ್ತಾ? ಎಂದು ಮೆಸೇಜ್​ ಮಾಡಿದ. ಬಳಿಕ ಪವನ್​ ಯಾಕೆ ಎಂದು ಪವಿತ್ರಾ ಹೆಸರಲ್ಲಿ ಪವನ್​ ಪ್ರಶ್ನೆ ಮಾಡಿದ್ದ. 11 ಗಂಟೆಗೆ ಕೋರ್ಟ್​ ಅಟೆಂಡ್​ ಮಾಡ್ಬೇಕು ಎಂದು ರೇಣುಕಾಸ್ವಾಮಿ ಹೇಳಿದ್ದ. ಬಳಿಕ ಪವನ್​ ನೀನು ಎಷ್ಟೊತ್ತಿಗೆ ಕಾಲ್​ ಮಾಡ್ತೀಯಾ? ಎಷ್ಟೊತ್ತಿಗೆ ಕೋರ್ಟ್​ ಮುಗಿಯುತ್ತೆ ಎಂದು ಕೇಳಿದ್ದ. ಇದಕ್ಕೆ ರೇಣುಕಾಸ್ವಾಮಿ 12.30ಕ್ಕೆ ಎಂದಿದ್ದ. ಇದಿಷ್ಟೇ ಅಲ್ಲದೆ, ಪವನ್​, ನಿನ್ನ ಶಾಪ್​ ಹೊರಗಡೆ ಫೋಟೋ ಕಳುಹಿಸು ಎಂದಿದ್ದ. ಇದಕ್ಕೆ ರೇಣುಕಾಸ್ವಾಮಿ ಯಾಕೆ? ಯಾವ ಫೋಟೋ ಸೆಂಡ್​ ಮಾಡಬೇಕು ಎಂದು ಕೇಳಿದ್ದ. ಇದಕ್ಕೆ ಪವನ್​ ನೀನು ಸುಮ್ಮನೇ ಸುಳ್ಳು ಹೇಳ್ತಿಯಾ ಅಂತಾ ಡೌಟು ಎಂದ್ದಿದ್ದ. ಪವಿತ್ರಾ ಗೌಡ ಅಂದುಕೊಂಡು ಮದರ್​ ಪ್ರಾಮಿಸ್​ ನಾನು ಡ್ಯೂಟಿಯಲ್ಲಿ ಇದ್ದೀನಿ ಕಣೆ ಆಯ್ತಾ? ಎಂದು ರೇಣುಕಾಸ್ವಾಮಿ ಹೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಪವನ್​ ನಿಜ ಅನಿಸ್ತಿಲ್ಲ ಕಣೋ ಎಂದಿದ್ದ. ಬಳಿಕ ರೇಣುಕಸ್ವಾಮಿ ಫೋಟೋ ಸೆಂಡ್​ ಮಾಡಿದ್ದಾನೆ. ಇದೀಗ ಓಕೆ ನಿಜ ಅನ್ನಿಸ್ತು ಎಂದು ಪವಿತ್ರಾ ಸೋಗಿನಲ್ಲಿ ಪವನ್​ ಹೇಳಿದ್ದಾನೆ. ಇದಾದ ಬಳಿಕ ರೇಣುಕಾಸ್ವಾಮಿ ಮರ್ಮಾಂಗದ ಫೋಟೋ ಕಳುಹಿಸಿ ಇದು ಬೇಕಾ ನಿನಗೆ ಎಂದಿದ್ದಾನೆ. ಪವಿತ್ರಾ ಹೆಸರಲ್ಲಿ ಪವನ್​ ಬೇಕು...ಬೇಕು.. ಬೇಕು ಎಂದಿದ್ದಾನೆ. ಬಳಿಕ ರೇಣುಕಾಸ್ವಾಮಿ ನ್ಯೂ ಓಂಕಾರ್​ ಫ್ಯಾಕ್ಟರಿ ಹತ್ರ ಎಂದಿದ್ದಾನೆ. ಇದಕ್ಕೆ ಓಕೆ..ಓಕೆ..ಓಕೆ ಎಂದು ಪವನ್​ ರಿಪ್ಲೈ ಮಾಡಿದ್ದಾನೆ. ಬಳಿಕ ಓಕೆ ಬಾಯ್​ ಎಂದಿರುವ ರೇಣುಕಾಸ್ವಾಮಿ ನಿನ್ನ ಫೋಟೋ ನೋಡ್ಕೊಂಡು ಹೊ***ತಾ ಇದೀನಿ ಎಂದಿದ್ದಾನೆ. ಅಲ್ಲದೆ, ನನ್ನ ಜೊತೆ ಸೀಕ್ರೆಟ್​ ಆಗಿ ಲಿವ್​ ಇನ್​ ರಿಲೇಶನ್​ಶಿಪ್​ ಮಾಡ್ತೀಯಾ ಹೇಳು ಪ್ಲೀಸ್​ ಎಂದಿದ್ದಾನೆ. ಇದಕ್ಕೆ ಪವಿತ್ರಾ ಸೋಗಿನಲ್ಲಿ ಪವನ್​, ಓಕೆ.. ಬಟ್​ ನೀನು ನಾನು ಕರೆದಾಗ ಬರ್ತಿಯಾ? ಸೋ ಅದಕ್ಕೆ ಬೇಜಾರ್​ ಎಂದಿದ್ದಾರೆ. ಅದಕ್ಕೆ ರೇಣುಕಾಸ್ವಾಮಿ ನಿನಗೋಸ್ಕರ ಬರ್ತಿನಿ ಕಣೆ ಆಯ್ತಾ, ನಾನು ಇರೋದು ದುರ್ಗ ಕಣೆ ಎಂದಿದ್ದಾನೆ. ಯಾವಾಗ ಬೆಂಗಳೂರಿಗೆ ಬರ್ತಿಯಾ ಎಂದು ಪವನ್​ ಕೇಳಿದ್ದಾನೆ. ಪತ್ರಿ ತಿಂಗಳು ನಿನಗೆ 10 ಸಾವಿರ ಕೊಡ್ತೀನಿ ಕಣೆ ಆಯ್ತಾ ಎಂದು ರೇಣುಕಾಸ್ವಾಮಿ ಹೇಳಿದ್ದಾನೆ ಎಂದು ಚಾರ್ಜ್​ಶೀಟ್​ನಲ್ಲಿ ಸಂಪೂರ್ಣ ಚಾಟಿಂಗ್​ ದಾಖಲಾಗಿದೆ.

ಪವಿತ್ರಾ ಆಕ್ರೋಶ

ರೇಣುಕಾಸ್ವಾಮಿಯ ವರ್ತನೆ ಪವಿತ್ರಾ ಗೌಡಳ ಕೋಪಕ್ಕೆ ಕಾರಣವಾಯಿತು. ಈ ವಿಚಾರವನ್ನು ತನ್ನ ಮ್ಯಾನೇಜರ್​ ಪವನ್​ಗೆ ಪವಿತ್ರಾ ತಿಳಿಸಿದಳು. ಬಳಿಕ ಪವನ್​ ಪವಿತ್ರಾ ತನ್ನ ಹೆಸರಿನಲ್ಲಿ ರೇಣುಕಾಸ್ವಾಮಿಗೆ ಮಸೇಜ್​ ಮಾಡಿ, ಆತನಿಂದ ಎಲ್ಲ ಮಾಹಿತಿ ಪಡೆದುಕೊಂಡನು. ಈ ಸಂಗತಿಯನ್ನು ನಟ ದರ್ಶನ್​ಗೆ ತಿಳಿಸಿದನು. ನಂತರ ಚಿತ್ರದುರ್ಗ ಜಿಲ್ಲೆಯ ದರ್ಶನ್​ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರಗೆ ತಿಳಿಸಿದ್ದು, ಆತ ಒಂದು ತಂಡವನ್ನು ಕಟ್ಟಿಕೊಂಡು ರೇಣುಕಾಸ್ವಾಮಿಯನ್ನು ಕಿಡ್ನಾಪ್​ ಮಾಡಿ, ಆರ್​ಆರ್​ ನಗರದ ಪಟ್ಟಣಗೆರೆ ಶೆಡ್​ಗೆ ಕರೆತಂದಿದ್ದಾನೆ. ಇದೇ ಸಂದರ್ಭದಲ್ಲಿ ಆರ್​ಆರ್​ ನಗರದ ಸ್ಟೋನಿ ಬ್ರೂಕ್​ ರೆಸ್ಟೋರೆಂಟ್​ನಲ್ಲಿ ಪಾರ್ಟಿ ಮಾಡುತ್ತಿದ್ದ ನಟ ದರ್ಶನ್​ಗೆ ಈ ವಿಚಾರವನ್ನು ತಿಳಿಸಲಾಗಿದೆ. ತಕ್ಷಣ ರೆಸ್ಟೋರೆಂಟ್​ನಿಂದ ಹೊರಟ ದರ್ಶನ್​, ಪವಿತ್ರಾ ಗೌಡ ಮನೆಗೆ ತೆರಳಿ, ಆಕೆಯನ್ನು ತನ್ನ ಜತೆ ಕರೆದುಕೊಂಡು ಪಟ್ಟಣಗೆರೆ ಶೆಡ್​ ಬಳಿ ಬಂದಿದ್ದಾರೆ. ಶೆಡ್​ನಲ್ಲಿ ರೇಣುಕಾಸ್ವಾಮಿಯನ್ನು ನೋಡುತ್ತಿದ್ದಂತೆ ಕೆರಳಿ ಕೆಂಡವಾದ ಪವಿತ್ರಾ, ಅವನನ್ನ ಬಿಡಬೇಡಿ… ಸರಿಯಾಗಿ ಪಾಠ ಕಲಿಸಿ… ಇವನಂಥವರು ಈ ಭೂಮಿ ಮೇಲೆಯೇ ಇರಬಾರದು ಎಂದು ಕೂಗಾಡಿದ್ದಾಳೆ. ಅಷ್ಟೇ ಅಲ್ಲದೆ, ಡಿ-ಗ್ಯಾಂಗ್​ನಿಂದ ಮೊದಲೇ ಹೊಡೆತ ತಿಂದು ನಿತ್ರಾಣಗೊಂಡಿದ್ದ ರೇಣುಕಾಸ್ವಾಮಿ ಮೇಲೆ ತನ್ನ ಚಪ್ಪಲಿಯಿಂದ ಥಳಿಸಿದಳು ಎಂದು ಚಾರ್ಜ್​ಶೀಟ್​ನಲ್ಲಿ ತಿಳಿಸಲಾಗಿದೆ. ರೇಣುಕಾಸ್ವಾಮಿ ಮುಖದಲ್ಲಿದ್ದ ರಕ್ತದ ಕಲೆ ಪವಿತ್ರಾ ಗೌಡಳ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಪವಿತ್ರಾಳ ಮಾತಿನಿಂದ ಪ್ರಚೋದನೆಗೊಂಡ ದರ್ಶನ್​ ಮತ್ತು ಅವನ ಸಹಚರರು ಮೃಗಗಳಂತೆ ರೇಣುಕಾಸ್ವಾಮಿ ಮೇಲೆರಗಿ ಬರ್ಬರವಾಗಿ ಕೊಂದಿದ್ದಾರೆ ಎಂದು ಕೋರ್ಟ್​ಗೆ ಸಲ್ಲಿಸಿರುವ ದಾಖಲೆಯಲ್ಲಿ ತನಿಖಾಧಿಕಾರಿಗಳು ಒತ್ತಿ ಹೇಳಿದ್ದಾರೆ. ರಾಘವೇಂದ್ರ, ರೇಣುಕಾಸ್ವಾಮಿಯನ್ನು ಕಿಡ್ನಾಪ್​ ಮಾತ್ರ ಮಾಡಿರಲಿಲ್ಲ, ಆತನ ಮೇಲೆ ಹಲ್ಲೆ ಸಹ ಮಾಡಿದ್ದರು. ಪಟ್ಟಣಗೆರೆ ಶೆಡ್​ನಲ್ಲಿ ತೀವ್ರ ಹಲ್ಲೆ ಮಾಡಿದ ಬಳಿಕ ಮೃತಪಟ್ಟ ರೇಣುಕಾಸ್ವಾಮಿಯನ್ನು ಕಾಮಾಕ್ಷಿಪಾಳ್ಯ ಬಳಿಯ ಮೋರಿಯಲ್ಲಿ ಎಸೆಯಲಾಯಿತು ಎಂದು ಚಾರ್ಜ್​ಶೀಟ್​ನಲ್ಲಿ ಹೇಳಲಾಗಿದೆ.

ಸಾಕ್ಷಿಗಳು

ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಲು ಬಳಸಿದ ಸಾಧನವು ಪೋರ್ಟಬಲ್ ಮೆಗ್ಗರ್ ಆಗಿದ್ದು, ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಆರೋಪಿಗಳಾದ ನಿಖಿಲ್ ನಾಯ್ಕ್, ಕೇಶವಮೂರ್ತಿ ಮತ್ತು ಕಾರ್ತಿಕ್ ಎಂಬುವವರು ಕೊಲೆ ಆರೋಪವನ್ನು ತಮ್ಮ ಮೇಲೆ ಹಾಕಿಕೊಂಡು ಪೊಲೀಸರ ಮುಂದೆ ಶರಣಾಗತಿಯ ನಾಟಕವಾಡಿದ್ದರು. ಅವರ ಮೇಲೆ ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪವನ್ನು ಹೊರಿಸಲಾಗಿದೆ. ಉಳಿದ 14 ಆರೋಪಿಗಳ ಮೇಲೆ ಅಪಹರಣ, ಕೊಲೆ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಆರೋಪವಿದೆ. ಎಲ್ಲ 17 ಆರೋಪಿಗಳು ಬೇರೆ ಬೇರೆ ಜೈಲುಗಳಲ್ಲಿದ್ದಾರೆ. ಮೂವರನ್ನು ಪ್ರತ್ಯಕ್ಷದರ್ಶಿಗಳು ಎಂದು ಗುರುತಿಸಲಾಗಿದೆ. ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್​ಪಿಸಿ 164 ರ ಅಡಿಯಲ್ಲಿ ಸುಮಾರು 27 ಜನರು ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸಿಆರ್​ಪಿಸಿ 161 ರ ಅಡಿಯಲ್ಲಿ ಸುಮಾರು 97 ಜನರ ಹೇಳಿಕೆಗಳನ್ನು ಪೊಲೀಸರ ಮುಂದೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ವರದಿಯನ್ನು ಪೊಲೀಸರು ಸಲ್ಲಿಸಿದ್ದಾರೆ. ತಹಸೀಲ್ದಾರ್, ವೈದ್ಯರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಎಂಟು ಸರ್ಕಾರಿ ಅಧಿಕಾರಿಗಳು ಮತ್ತು 56 ಪೊಲೀಸ್ ಸಿಬ್ಬಂದಿ ಮತ್ತು 59 ಮಹಜರ್ (ಸ್ಥಳ ತಪಾಸಣೆ) ಸಾಕ್ಷಿಗಳ ಹೇಳಿಕೆಗಳನ್ನು ಸಲ್ಲಿಸಲಾಗಿದೆ.

ಎಫ್‌ಎಸ್‌ಎಲ್‌ನಿಂದ ಆರೋಪಿಯ ಮೊಬೈಲ್ ಫೋನ್ ಡೇಟಾ, ದರ್ಶನ್ ಮತ್ತು ಗ್ಯಾಂಗ್ ಪಾರ್ಕಿಂಗ್ ಯಾರ್ಡ್ ಪ್ರವೇಶಿಸುವ ಮತ್ತು ನಿರ್ಗಮಿಸುವ ಸಿಸಿಟಿವಿ ದೃಶ್ಯಗಳು, ಕರೆ ವಿವರಗಳ ದಾಖಲೆಗಳು (ಸಿಡಿಆರ್), ಮೊಬೈಲ್ ಟವರ್ ಲೊಕೇಶನ್, ವಾಟ್ಸ್​ಆ್ಯಪ್​ ಸಂದೇಶಗಳು ಮತ್ತು ಹಲ್ಲೆಯ ಫೋಟೋಗಳು ಇತರ ದಾಖಲೆಗಳಲ್ಲಿ ಸೇರಿವೆ. ದರ್ಶನ್ ಮತ್ತು ಇತರ ಆರೋಪಿಗಳ ಮನೆಗಳಿಂದ ವಶಪಡಿಸಿಕೊಂಡ ಹಣವನ್ನು ಸಹ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಹೈಪ್ರೊಫೈಲ್​ ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಆಯುಕ್ತ (ವಿಜಯನಗರ ಉಪವಿಭಾಗ) ಚಂದನ್ ಕುಮಾರ್ ನೇತೃತ್ವದಲ್ಲಿ ನಡೆಸಲಾಗಿದೆ. ಕಾಮಾಕ್ಷಿಪಾಳ್ಯ, ಸಿಕೆ ಅಚ್ಚುಕಟ್ಟು, ಕೆಂಗೇರಿ ಹಾಗೂ ಗೋವಿಂದರಾಜನಗರ, ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಕೂಡ ತನಿಖಾ ತಂಡದಲ್ಲಿದ್ದರು. ಹೈದರಾಬಾದ್‌ನ ಸಿಎಫ್​ಎಸ್​ಎಲ್​ನಿಂದ ಕೆಲವು ವರದಿಗಳು ಬಾಕಿ ಉಳಿದಿದ್ದು, ಸಿಆರ್‌ಪಿಸಿ 173 (8) ಅಡಿಯಲ್ಲಿ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net