

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದಿಂದ ಭಾರತದ ಸ್ಟಾರ್ ಅಲ್ರೌಂಡರ್ ರವೀಂದ್ರ ಜಡೇಜಾ ಹೊರನಡೆಯಲಿದ್ದಾರೆ ಎಂಬ ಸುದ್ದಿ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಈ ಸುದ್ದಿಗೆ ಪುಷ್ಠಿ ನೀಡುವಂತೆ ರವೀಂದ್ರ ಜಡೇಜಾರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ಕಣ್ಮರೆಯಾಗಿದೆ.
ಸರ್ ಜಡೇಜಾ 2018, 2021 ಮತ್ತು 2023 ರಲ್ಲಿ CSK ಪರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು 2022 ರ ಅವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ತಂಡದ ನಾಯಕರಾಗಿ ಮುನ್ನಡೆಸಿದ್ದಾರೆ. ಅಲ್ಲದೆ, CSK ಯ ಇತ್ತೀಚಿನ ಯಶಸ್ಸಿನಲ್ಲಿ ಜಡೇಜಾ ನಿರ್ಣಾಯಕ ಪಾತ್ರ ವಹಿಸಿದ್ದಾರೆ.
2026 ರ IPL ಗಿಂತ ಮುಂಚಿತವಾಗಿ ಸಿಎಸ್ಕೆ ಅತಿದೊಡ್ಡ ಟ್ರೇಡ್ ಮಾಡಲು ಯೋಚಿಸುತ್ತಿದೆ ಎಂದು ವರದಿಯಾಗಿದೆ. ಅಲ್ಲದೆ, ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಚೆನ್ನೈಗೆ ಟ್ರೇಡ್ ಆಗುವ ಸಾಧ್ಯತೆಯಿದೆ, ಇದರಿಂದಾಗಿ ರವೀಂದ್ರ ಜಡೇಜಾಗೆ ಸಿಎಸ್ಕೆಯಿಂದ ರಾಜಸ್ಥಾನ್ ಹೋಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ. ಈ ಕುತೂಹಲಕ್ಕೆ ಮತ್ತಷ್ಟು ಕಾರಣವೆಂದರೆ, ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್ ಕೂಡ ಒಪ್ಪಂದದ ಭಾಗವಾಗಿದ್ದಾರೆ ಎಂದು ಹೇಳಲಾಗಿದ್ದು, ಇದು ರಾಜಸ್ಥಾನಕ್ಕೆ ಸೇರಬಹುದು.
ಈ ವರದಿಗಳ ಪ್ರಕಾರ ಸ್ಯಾಮ್ಸನ್ರನ್ನು ಕರೆತರಲು ಫ್ರಾಂಚೈಸಿ ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ ಎಂದು ಸಿಎಸ್ಕೆ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಅದರೆ, ಈ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜಸ್ಥಾನ ರಾಯಲ್ಸ್ ಪ್ರಸ್ತುತ ಪ್ರಸ್ತಾಪದ ಮೌಲ್ಯಮಾಪನ ಮಾಡುತ್ತಿದೆ. ಅಲ್ಲದೆ, ಕೆಲವರು ಸೋಮವಾರ ಬೆಳಿಗ್ಗೆ RoyalNavGhan ಎಂಬ ಹೆಸರಿನಲ್ಲಿರುವ ಅವರ ಅಧಿಕೃತ Instagram ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಘೋಷಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜಡೇಜಾ, ತಮ್ಮ ವೃತ್ತಿ ಜೀವನದ ನೆಡೆದಿರುವ ಘಟನೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಐಪಿಎಲ್ ಸಮಯದಲ್ಲಿ, ಜಡೇಜಾ ಸಿಎಸ್ಕೆ ಮೇಲಿನ ಪ್ರೀತಿ ಮತ್ತು ಅಭಿಮಾನಿಗಳೊಂದಿಗಿನ ಸಂಪರ್ಕದ ಬಗ್ಗೆ ಪೋಸ್ಟ್ ಮಾಡುತ್ತಾರೆ.
ಈ ಬಗ್ಗೆ ಮಾತನಾಡಿರುವ ಭಾರತ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಸಿಎಸ್ಕೆ ತಂಡವನ್ನು ಮತ್ತೆ ಚಾಂಪಿಯನ್ಗಳನ್ನಾಗಿ ಮಾಡುವ ಗುರಿಯೊಂದಿಗೆ ಸ್ಯಾಮ್ಸನ್-ಜಡೇಜಾ ವ್ಯಾಪಾರ ಮುಂದುವರಿಯಲು ಎಂಎಸ್ ಧೋನಿ ಅವಕಾಶ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಂಡದ ಒಳಿತಿಗಾಗಿ ಜಡೇಜಾರನ್ನು ತ್ಯಾಗ ಮಾಡಬೇಕಾದರೆ, ಧೋನಿ ಮಾಡುತ್ತಾರೆ. ಅಲ್ಲದೆ, ಧೋನಿ ಸ್ನೇಹದ ಆಧಾರದ ಮೇಲೆ ಹೇಗೆ ಕೆಲಸ ಮಾಡುತ್ತಾರೆ. ಕೆಲವು ಹೆಚ್ಚುವರಿ ಅವಕಾಶಗಳನ್ನು ನೀಡುತ್ತಾರೆ ಎಂದು ಜನರು ಹೆಚ್ಚಾಗಿ ಹೇಳುತ್ತಾರೆ. ಆದರೆ ಇದರರ್ಥ ಗಮನ ಗೆಲುವಿನಿಂದ ಬೇರೆಡೆಗೆ ತಿರುಗಿದೆ ಎಂದಲ್ಲ. ಸಿಎಸ್ಕೆ ಚಾಂಪಿಯನ್ಗಳನ್ನಾಗಿ ಮಾಡುವುದು ಗುರಿಯಾಗಿದೆ. ಇದಕ್ಕಾಗಿ ಅಗತ್ಯವಿದ್ದರೆ ಜಡೇಜಾ ಅವರನ್ನು ಬಿಡುತ್ತಾರೆ. ತಂಡಕ್ಕೆ ಉತ್ತಮ ಆಯ್ಕೆ ಸಿಗುತ್ತದೆ ಎಂದು ಧೋನಿ ಭಾವಿಸಿದರೆ, ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೈಫ್ ಹೇಳಿದ್ದಾರೆ. (ಏಜೆನ್ಸೀಸ್)