T20 World Cup; ಫೈನಲ್ ಆತಿಥ್ಯಕ್ಕೆ ಅಹಮದಾಬಾದ್​ ಫಿಕ್ಸ್​: ಪಾಕಿಸ್ತಾನ ಫೈನಲ್ ತಲುಪಿದ್ರೆ ಹೇಗೆ?

Bbau - 2025-11-10T131411.302
Published on

ನವದೆಹಲಿ: ಮುಂಬರುವ ಟಿ20 ವಿಶ್ವಕಪ್(T20 World Cup) ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಅತಿಥ್ಯವಹಿಸಲಿದೆ. ವಿಶ್ವಕಪ್​ ಆರಂಭವಾಗಲು ಕೆಲವೇ ತಿಂಗಳುಗಳು ಬಾಕಿ ಇರುವಾಗ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ಮತ್ತು ಫೈನಲ್ ಪಂದ್ಯವನ್ನು ಆಯೋಜಿಸಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣವು ಸೆಮಿಫೈನಲ್‌ಗಳಲ್ಲಿ ಒಂದನ್ನು ಆಯೋಜಿಸಲಿದೆ ಎಂದು ಸೋಮವಾರ ವರದಿಯಾಗಿದೆ.

ಒಂದು ವೇಳೆ ಪಾಕಿಸ್ತಾನ ಸೆಮಿಫೈನಲ್ ತಲುಪಿದರೆ, ಎದುರಾಳಿ ಭಾರತವಾಗಿದ್ದರೂ ಸಹ ಅವರ ಪಂದ್ಯ ಕೊಲಂಬೊದಲ್ಲಿ(ಶ್ರೀಲಂಕಾ) ನಡೆಯಲಿದೆ. ದೆಹಲಿ, ಚೆನ್ನೈ ಮತ್ತು ಕೋಲ್ಕತ್ತಾ ಭಾರತದಲ್ಲಿ ಪಂದ್ಯಗಳನ್ನು ಆಯೋಜಿಸುವ ಇತರ ಮೂರು ಸ್ಥಳಗಳಾಗಿವೆ ಎಂದು ವರದಿ ಹೇಳಿದೆ.

ಪಾಕಿಸ್ತಾನ ಫೈನಲ್ ತಲುಪಿದ್ರೆ?

ಕೊಲಂಬೊ ಸೇರಿದಂತೆ ಶ್ರೀಲಂಕಾದ ಮೂರು ಸ್ಥಳಗಳು ಕ್ರೀಡಾಕೂಟವನ್ನು ಆಯೋಜಿಸಲಿವೆ. ಪಾಕಿಸ್ತಾನ ಫೈನಲ್ ತಲುಪಿದರೆ, ಫೈನಲ್ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಐಸಿಸಿ, ಬಿಸಿಸಿಐ ಮತ್ತು ಪಿಸಿಬಿ ಮಾಡಿಕೊಂಡ ಒಪ್ಪಂದದ ಪ್ರಕಾರ, ಆತಿಥೇಯ ರಾಷ್ಟ್ರ ಏನೇ ಇರಲಿ, ಭಾರತ ಮತ್ತು ಪಾಕಿಸ್ತಾನ 2027 ರವರೆಗೆ ತಮ್ಮ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿವೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ವರ್ಷ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಅಂತರದ ಗೆಲುವಿನೊಂದಿಗೆ ಭಾರತ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು ಎಂಬುದು ಗಮನಿಸಬೇಕಾದ ಸಂಗತಿ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net