ಕೊೈಲದಲ್ಲಿ ಸಬ್‌ಸ್ಟೇಷನ್ ಕಾಮಗಾರಿ ಪರಿಶೀಲನೆ : ಶ್ರೀಘ್ರವಾಗಿ ಪೂರ್ಣಗೊಳಿಸುವಂತೆ ಕೃಷ್ಣಪ್ಪ ರಾಮಕುಂಜ ಆಗ್ರಹ

New Project (14)
Published on

ಕಡಬ: ಕೊೈಲ, ರಾಮಕುಂಜ ಭಾಗದ ಜನರನ್ನು ನಿರಂತರವಾಗಿ ಕಾಡುತ್ತಿದ್ದ ವಿದ್ಯುತ್ ಕಡಿತ, ವೋಲ್ಟೇಜ್ ಸಮಸ್ಯೆ ಹಿನ್ನೆಲೆಯಲ್ಲಿ ಇದೀಗ ಕೊೈಲದಲ್ಲಿ ನಡೆಯುತ್ತಿರುವ ಸಬ್‌ಸ್ಟೇಷನ್ ಕಾಮಗಾರಿಯನ್ನು ಶ್ರೀಘ್ರವಾಗಿ ಪೂರ್ಣಗೊಳಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಂಯೋಜಕ ಜಿ.ಕೃಷ್ಣಪ್ಪ ರಾಮಕುಂಜ ಮೆಸ್ಕಾಂ ಇಲಾಖಾ ಅಧಿಕಾರಿಗಳನ್ನು ಮತ್ತು ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಆಗ್ರಹಿಸಿದರು.

ಕೊೈಲದಲ್ಲಿ ನಡೆಯುತ್ತಿರುವ ಸಬ್ ಸ್ಟೇಷನ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದ ಅವರು ಮೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮತ್ತು ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರೊಂದಿಗೆ ಮಾತನಾಡಿ ಶ್ರೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವಂತೆ ಒತ್ತಾಯಿಸಿದರು.

ಮೆಸ್ಕಾಂ ಇಲಾಖಾ ಸಹಾಯಕ ಇಂಜಿನಿಯರ್ ರಾಜೇಶ್, ಜಿಪಂ ಮಾಜಿ ಸದಸ್ಯ ಸರ್ವೋತ್ತಮ ಗೌಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ಎಚ್.ಆದಂ, ಕೊೈಲ ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಸ್, ಉಪಾಧ್ಯಕ್ಷ ಯತೀಶ್, ಸದಸ್ಯರಾದ ನಝೀರ್ ಪೂರಿಂಗ, ಚಿದಾನಂದ, ಜೊಹರಾ ಇಕ್ಬಾಲ್, ಸಫೀಯಾ, ಪ್ರಮುಖರಾದ ಎ.ಕೆ.ಬಶೀರ್, ಎಸ್.ಅಬ್ದುಲ್ ರಹಿಮಾನ್, ಸಲೀಕತ್, ಝೈನ್ ಆತೂರು, ಜುನೈದ್, ಸೈಟ್ ಇಂಜಿನಿಯರ್ ಸಾಗರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net