ಎಸ್‌ಎಟಿ ಶಿಕ್ಷಣ ಸಂಸ್ಥೆಗಳ ಶತಮಾನೋತ್ಸವ ಸಂಪನ್ನ

BDK_09 MAY_03(1)
Published on

ಮಂಜೇಶ್ವರ: ಎಸ್‌ಎಟಿ ಶಿಕ್ಷಣ ಸಂಸ್ಥೆಗಳು ಹಾಗೂ ಶಾಲಾ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಗುರುವಾರ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಳದ ಶಾಲೆಗಳ ಶತಮಾನೋತ್ಸವ ಸಂಭ್ರಮ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸುನೀಲ್ ಭಟ್ ಎಂ. ಅಧ್ಯಕ್ಷತೆ ವಹಿಸಿದ್ದರು. ಅನಂತೇಶ್ವರ ದೇವಸ್ಥಾನ ಅಧ್ಯಕ್ಷ ತೋನ್ಸೆ ಗಣಪತಿ ಪೈ ಉದ್ಘಾಟಿಸಿದರು. ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವೀನಾ ಮೊಂತೇರೊ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ., ಕೇರಳ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಪಯ್ಯನ್ನೂರು ರಮೇಶ್ ಪೈ, ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಂಕರ್ ಯು.ಮಂಗೇಶ್ವರ, ಮಂಜೇಶ್ವರ ಗ್ರಾಪಂ ಆರೋಗ್ಯ- ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಪ್ರಿಯಾ ಶೆಣೈ ಉಪಸ್ಥಿತರಿದ್ದರು.

ಈ ಸಂದರ್ಭ ಗುರುವಂದನಾ ಕಾರ್ಯಕ್ರಮ ಜರುಗಿತು. ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಮುಖರಾದ ಆರ್.ನಿತಿನ್ ಚಂದ್ರ ಪೈ ಮಂಜೇಶ್ವರ, ಪ್ರಶಾಂತ್ ಹೆಗ್ಡೆ, ನರೇಂದ್ರ ಪ್ರಭು ಮಂಗಳೂರು, ರಾಜೇಶ್ ಪೈ ಕಾಸರಗೋಡು, ರಾಹುಲ್ ಕಾಮತ್, ದೇವದಾಸ್ ವಿ.ಪ್ರಭು ಎಸ್., ಸುಮನಾ, ಸುರೇಖಾ ಮಲ್ಯ ಎಂ., ತೇಜಸ್ ಕಿರಣ್, ಅಬ್ದುಲ್ ಬಶೀರ್ ಬಿ., ಅಹಮದ್ ಸಿಹಾದ್ ಇದ್ದರು. ಜಿ.ಪ್ರಶಾಂತ್ ಪೈ ಸ್ವಾಗತಿಸಿದರು. ಪೂರ್ಣಯ್ಯ ಪುರಾಣಿಕ್ ವಂದಿಸಿದರು. ಈಶ್ವರ್ ಕಿದೂರು, ಜಯಪ್ರಕಾಶ್ ಶೆಟ್ಟಿ ಅಂಗಡಿದಾರು, ನವ್ಯಶ್ರೀ ನಿರೂಪಿಸಿದರು. ನಾಗೇಶ್ ವಿ. ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net