

ಗಂಗೊಳ್ಳಿ: ಜಮಾಬಂದಿ ಮೂಲಕ ಗ್ರಾಮಸ್ಥರಿಗೆ ಗ್ರಾಪಂ ವಾರ್ಷಿಕ ಎಲ್ಲ ಕಾರ್ಯಕ್ರಮ, ಲೆಕ್ಕಪತ್ರ ನಿರ್ವಹಣೆ ಬಗ್ಗೆ ಮಾಹಿತಿ ತಿಳಿದು, ತಪ್ಪಿದಲ್ಲಿ ನೇರ ಪ್ರಶ್ನೆ ಮಾಡಿ ಉತ್ತರ ಪಡೆಯಬಹುದು. ಕಾಮಗಾರಿಗಳ ಗುಣಮಟ್ಟ ವೀಕ್ಷಣೆ ಮಾಡಬಹುದು. ಇದರ ಸದುಪಯೋಗ ಗ್ರಾಮಸ್ಥರು ಪಾಲ್ಗೊಂಡು ತಿಳಿಯಬೇಕು ಎಂದು ಜಮಾಬಂದಿ ಅಧಿಕಾರಿ ಮಧುಕರ ಹೇಳಿದರು.
ಗಂಗೊಳ್ಳಿ ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಗಂಗೊಳ್ಳಿ ಗ್ರಾಪಂ 2023-24ನೇ ಸಾಲಿನ ಜಮಾಬಂದಿಯಲ್ಲಿ ಮಾತನಾಡಿದರು.
ಪಿಡಿಒ ಉಮಾಶಂಕರ್ ಎಚ್., ಗ್ರಾಮ ಆಡಳಿತ ಅಧಿಕಾರಿ ಅಂಜನಪ್ಪ, ಜಮಾಬಂದಿ ಸಹಾಯಕಿ, ಕೃಷಿ ಇಲಾಖೆ ಉಮಾ ಜಿ.ಭೋವಿ, ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಸಂಘದ ಸದಸ್ಯರು ಹಾಗೂ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.