

ಬೈಂದೂರು: ಇಲ್ಲಿನ ವತ್ತಿನೆಣೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ)ದಲ್ಲಿ ಗುರುವಾರ ಕುತ್ಯಾರು ಕೇಂಜಶ್ರೀಧರ ತಂತ್ರಿಗಳ ಆಚಾರ್ಯತ್ವದಲ್ಲಿ ಮಠದ ಪ್ರಧಾನ ಅರ್ಚಕ ಸುಬ್ರಾಯ ನಾವಡ ನೇತೃತ್ವದ ವೈದಿಕ ತಂಡದವರಿಂದ ರಾಘವೇಂದ್ರ ಸ್ವಾಮಿ ನೂತನ ಶಿಲಾಮಯ ಗರ್ಭಗೃಹ ಶಿಲಾನ್ಯಾಸ ನೆರವೇರಿತು.
ಶ್ರೀ ರಾಘವೇಂದ್ರ ಸ್ವಾಮಿ ಮಠದ ಟ್ರಸ್ಟ್ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ, ಟ್ರಸ್ಟಿಗಳಾದ ಎಸ್.ರಾಜು ಪೂಜಾರಿ, ಮಂಜುನಾಥ ಶೆಟ್ಟಿ, ರವೀಂದ್ರ ಶ್ಯಾನುಭಾಗ್, ದಿನೇಶ ಕೆ., ನಾಗರಾಜ ದೇವಾಡಿಗ, ಸೋಮಶೇಖರ, ಶಿರೂರು ದಿನಕರ ಶೆಟ್ಟಿ, ಮಂಜುನಾಥ ಸೆಳ್ಳೆಕುಳ್ಳಿ, ಕೃಷ್ಣ ದೇವಾಡಿಗ, ಅನ್ನಪೂರ್ಣಾ ಅರುಣ್ ಅಡಿಗ, ಯು.ಉದಯ್ ಪಡಿಯಾರ್ ಮೊದಲಾದವರು ಇದ್ದರು.