ಸಂಘದ ಅಭಿವೃದ್ಧಿಗೆ ಸದಸ್ಯರ ಸಹಕಾರ

fishers
ತಾರಾಪತಿ ಮೀನುಗಾರರ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಆನಂದ. ಎ. ಖಾರ್ವಿ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸಹಕಾರಿ ಸಂಘ ಹಿಂದಿನಂತೆ ಪ್ರಸಕ್ತ ಸಾಲಿನಲ್ಲೂ ಲಾಭಗಳಿಸಿ, ಉತ್ತಮ ವ್ಯವಹಾರ ಹೊಂದಿದೆ. ಸದಸ್ಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ನಿರಂತರ ಭಾಗವಹಿಸಬೇಕು. ಸಂಘಕ್ಕೆ ನೋಂದಣಿಯಾಗುವ ಹೊಸ ಸದಸ್ಯರು ಮತ್ತು ಹಳೇ ಸದಸ್ಯರು ಉಳಿತಾಯ ಖಾತೆಯಲ್ಲಿ ಉಳಿತಾಯ ಮಾಡಿ ಸಂಘವನ್ನು ಅಭಿವೃದ್ಧಿಪಡಿಸಬೇಕು ಎಂದು ತಾರಾಪತಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಆನಂದ ಎ.ಖಾರ್ವಿ ಹೇಳಿದರು.
ಬೈಂದೂರಿನ ಮಾತೃಶ್ರೀ ಸಭಾಭವನದಲ್ಲಿ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನಮಂತ್ರಿ ಮತ್ಸೃಸಂಪದ ಯೋಜನೆ ಅನ್ವಯ ಉಳಿತಾಯ ಮತ್ತು ಪರಿಹಾರ ಯೋಜನೆಯ ಬಾಕಿಯಿರುವ ಮೊತ್ತದ ಬಗ್ಗೆ ಚರ್ಚಿಸಲಾಯಿತು. 2024-25ನೇ ಸಾಲಿನ ಪ್ರಧಾನಮಂತ್ರಿ ಮತ್ಸೃಸಂಪದ ಯೋಜನೆ ಪ್ರಕಾರ ಈಗಾಗಲೇ ಫಲಾನುಭವಿಗಳ ಖಾತೆಗೆ 4500 ರೂ. ಜಮೆಯಾಗುತ್ತಿದ್ದು, ರಾಜ್ಯ ಸರ್ಕಾರದಿಂದಲೂ 1500 ರೂ. ಹೆಚ್ಚಳಗೊಳಿಸುವ ಮೂಲಕ ಮಾಡಿ 3000 ರೂ. ಜಮೆಯಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಂತಿಗೆ ಒಟ್ಟು 6000 ರೂ. ಫಲಾನುಭವಿಗಳ ಖಾತೆಗೆ ಜಮೆಯಾಗುವ ಯೋಜನೆಯನ್ನು ಸಂಘದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಸದುಪಯೋಗ ಪಡೆದುಕೊಳ್ಳಬಹುದು ಎಂದರು.

2023-2024ನೇ ಸಾಲಿನ ಲೆಕ್ಕಪತ್ರ ಮಂಡನೆ, ಮತ್ತು ವರದಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ ವಾಚಿಸಿದರು. ಉಪಾಧ್ಯಕ್ಷ ಬಿ.ಶ್ರೀಧರ ಖಾರ್ವಿ, ಹೆರಿಯಾ ಖಾರ್ವಿ, ರಾಮಚಂದ್ರ ಖಾರ್ವಿ, ವಿಠ್ಠಲ, ಮುತ್ತಯ್ಯ, ಶಾರದಾ ಖಾರ್ವಿ ಉಪಸ್ಥಿತರಿದ್ದರು. ಜಲಜಾಕ್ಷಿ ಸ್ವಾಗತಿಸಿದರು. ನಿರ್ದೇಶಕ ಕೃಷ್ಣ ಕೆ. ಖಾರ್ವಿ ವಂದಿಸಿದರು.

ತಲಾ ಸಂಘಕ್ಕೆ 10 ಲಕ್ಷ ರೂ. ಸಾಲ

ಮೀನುಗಾರ ಮಹಿಳೆಯರ ಶೂನ್ಯ ಬಡ್ಡಿ ದರ ಸಾಲದ ರಾಷ್ಟ್ರೀಕೃತ ಬ್ಯಾಂಕಿನಿಂದ ಈ ಹಿಂದೆ ಒಬ್ಬರಿಗೆ ತಲಾ 50,000 ರೂ. ಸಾಲದಂತೆ 10 ಜನರ ಗುಂಪಿಗೆ 5 ಲಕ್ಷ ಸಾಲ ನೀಡುತ್ತಿದ್ದು, ಈಗ ಹೆಚ್ಚುವರಿಯಾಗಿ ಸಾಲದ ಮೊತ್ತ ಸರ್ಕಾರದಿಂದ 3 ಲಕ್ಷ ರೂ. ಆಗಿದೆ. ಆದರೆ ಸದಸ್ಯರಿಗೆ ಪ್ರಥಮ ಸುತ್ತಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ 1 ಲಕ್ಷದ ತನಕ 10 ಸದಸ್ಯರ ಗುಂಪಿಗೆ 10 ಲಕ್ಷ ರೂ. ಸಾಲ ನೀಡುತ್ತಿದ್ದು, ಇದನ್ನು ಪಡೆಯಲು ಸಂಘಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಚಿಸಬೇಕು ಹಾಗೂ ಸಂಘದ ಸದಸ್ಯರು ಮೀನುಗಾರರ ಜನತಾ ಸಾಮೂಹಿಕ ಅಪಘಾತ ವಿಮಾ ನೊಂದಣಿ ಮಾಡಿಕೊಳ್ಳುವಂತೆ ಸಂಘದ ಅಧ್ಯಕ್ಷ ಆನಂದ ಎ.ಖಾರ್ವಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net