ಗಂಗೊಳ್ಳಿ: ಮರವಂತೆ ಬಂದರಿನ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಲ್ಲಿ ಕುಸಿದು ಬಿದ್ದು ನಾವುಂದ ಗ್ರಾಮದ ಮೀನುಗಾರ ಚಂದ್ರ(43) ಸಾವನ್ನಪ್ಪಿದ್ದಾರೆ.
ಚಂದ್ರ ಅವರು ಮಂಗಳವಾರ ಮರವಂತೆ ಬಂದರಿನಿಂದ ಗಂಗಾದೇವತೆ ದೋಣಿಯಲ್ಲಿ ಸಂಗಡಿಗರೊಂದಿಗೆ ಮೀನುಗಾರಿಕೆಗೆ ತೆರಳಿದ್ದು ಅರ್ಧ ಗಂಟೆ ನಂತರ ಗಾಳಿ ಮಳೆ ಬೀಸಿದ ಪರಿಣಾಮ ಚಂದ್ರ ಕುಸಿದು ದೋಣಿಯಲ್ಲಿ ಬಿದ್ದಿದ್ದು ಕೂಡಲೇ ದೋಣಿಯಲ್ಲಿದ್ದವರು ವಿಚಾರಿಸಿದಾಗ ಎದೆ ನೋವು ಎಂದು ಹೇಳಿ ಮೂರ್ಛೆ ಹೋಗಿದ್ದರು. ಕೂಡಲೇ ಅವರನ್ನು ದೋಣಿಯಲ್ಲಿ ದಡಕ್ಕೆ ತಂದು ಚಿಕಿತ್ಸೆಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಅವರು ಮೃತಪಟ್ಟಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.