ಕಾರ್ಕಳ: ಧ್ಯಾನ ಮಾಡಲು ಆಧ್ಯಾತ್ಮಿಕ ಜ್ಞಾನ ಅವಶ್ಯ. ಧ್ಯಾನಾಭ್ಯಾಸದಿಂದ ಆಂತರಿಕ ಶಾಂತಿ, ಜಾಗತಿಕ ಸದ್ಭಾವನೆ ಮಾನಸಿಕ ಸ್ಪಷ್ಟತೆ, ಒತ್ತಡದಿಂದ ಮುಕ್ತಿಯ ಜತೆಗೆ ಆರೋಗ್ಯ ಲಾಭ ಹಾಗೂ ಭಾವನಾತ್ಮಕ ಸ್ಥಿರತೆಯೊಂದಿಗೆ, ಸಂಬಂಧದಲ್ಲಿ ಸುಧಾರಣೆಯಾಗುತ್ತದೆ ಎಂದು ಮುಂಬೈಯ ರಾಜಯೋಗ ಶಿಕ್ಷಕಿ ರಾಜಯೋಗಿನಿ ಬಿ.ಕೆ.ಸುಕೇತಾ ಶೆಟ್ಟಿ ಹೇಳಿದರು.
ಎಸ್.ವಿ.ಟಿ. ಶಾಲಾ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ ಸಂಸ್ಕೃತ ಶಿಕ್ಷಕಿ ಪೂರ್ಣಿಮಾ ಶೆಣೈ ಭಗವದ್ಗೀತೆಯ 18 ಅಧ್ಯಾಯದ ಕಿರುಪರಿಚಯ ನೀಡಿದರು. ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ರಮೇಶ ನಾಯಕ್, ಭಗವದ್ಗೀತಾ ಪಾಠಶಾಲಾ ಶಿಕ್ಷಕಿ ಜಿ.ವಿಜಯಲಕ್ಷ್ಮೀ ಕಿಣಿ, ಬಿ.ಕೆ.ಅನ್ನಪೂರ್ಣ ಸಂಸ್ಥೆಯ ಪರಿಚಯ ನೀಡಿದರು. ಬಿ.ಕೆ.ಸ್ಮಿತಾ ನಾಯರ್ ಉಪಸ್ಥಿತರಿದ್ದರು. ಸನ್ನಿಧಿ ಪ್ರಾರ್ಥಿಸಿದರು. ಬಿ.ಕೆ.ವರದರಾಯ ಪ್ರಭು ಸ್ವಾಗತಿಸಿದರು. ಸೇವಾ ಕೇಂದ್ರ ಸಂಚಾಲಕಿ ಬಿ.ಕೆ.ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.