ಹನೆಹಳ್ಳಿಯಲ್ಲಿ ಅಂಗವಿಕಲರ ವಿಶೇಷ ಗ್ರಾಮಸಭೆ

grama
Published on

ಬ್ರಹ್ಮಾವರ: ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ವಿಶೇಷ ಗ್ರಾಮ ಸಭೆ ಮಲ್ಲಿಕಾ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆಯಿತು.

ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಧುಸೂಧನ್ ರಾವ್ ಅವರು 21 ಬಗೆಯ ವಿಕಲತೆ ಹಾಗೂ ಯುಡಿಐಡಿ ಕಾರ್ಡ್, ಶಿಶು ಪಾಲನಾ ಭತ್ಯೆ ಹಾಗೂ ವಿವಾಹ ಪ್ರೋತ್ಸಾಹ ಧನ ಸಹಿತ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಮಾನಸಿಕ ಆರೋಗ್ಯ ಹಾಗೂ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಕುರಿತು ಮನಶಾಸ್ತ್ರಜ್ಞ ವೈದ್ಯಾಧಿಕಾರಿ ಡಾ.ರೋಹಿಣಿ ಅವರು ಮಾಹಿತಿ ನೀಡಿದರು. ಮನಶಾಸ್ತ್ರಜ್ಞ ವೈಶಾಕ್ ಮಾನಸಿಕ ಆರೋಗ್ಯ ಹಾಗೂ ಥೆರಪಿಗಳ ಕುರಿತು, ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕಿ ಅರ್ಪಿತಾ ಬ್ಯಾಂಕ್ ವಿಮೆ ಕುರಿತು ಮಾತನಾಡಿದರು. ಮೀನಾಕ್ಷಿ ಅವರು ಗರ್ಭಿಣಿ, ಬಾಣಂತಿಯರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರ ಮರಕಾಲ, ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಸಮುದಾಯ ಆರೋಗ್ಯ ಅಧಿಕಾರಿ ಯಶಸ್ವಿನಿ ಹಾಗೂ ಸೌಮ್ಯಾ ಅಂಗವಿಕಲರ ಆರೋಗ್ಯ ತಪಾಸಣೆ ನಡೆಸಿದರು ಪಿಡಿಒ ಅರುಂಧತಿ ಏಸುಮನೆ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net