Champion Tropy 2025 ಉದ್ಘಾಟನಾ ಸಮಾರಂಭದ ಮಾಹಿತಿ ಬಹಿರಂಗ; ಪಾಕಿಸ್ತಾನಕ್ಕೆ ತೆರಳಲಿದ್ದಾರೆಯೇ ರೋಹಿತ್!?

dk (88)
Published on

ಇದೇ ಫೆ.19ರಂದು ಆರಂಭವಾಗಲಿರುವ​​ Champion Tropy 2025ರ ಉದ್ಘಾಟನಾ ಸಮಾರಂಭ ಪಾಕಿಸ್ತಾನದ ಲಹೋರ್​ನಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಯಾರೆಲ್ಲಾ ಹಾಜರಾಗಲಿದ್ದರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಜತೆಗೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ ಸಮಾರಂಭಕ್ಕೆ ತೆರಳಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

ಸಮಾರಂಭ ಫೆ.16ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ನಾಯಕರು ಪಾಲ್ಗೊಳಲಿದ್ದಾರೆ. ಲಾಹೋರ್​ನಲ್ಲಿ ಕಾರ್ಯಕ್ರಮ ನಡೆಯುವ ಹಿನ್ನೆಲೆ ಪಾಕಿಸ್ತಾನ ಪ್ರಧಾನಿ ಶಷಾಬಾಜ್​ ಷರಿಫ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕ್ರೆಟ್​​ ಮಂಡಳಿ(PCB) ಚೇರ್ಮನ್ ಮೋಸ್ಹಿನ್​​ ನಖ್ವಿ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎನ್​ಡಿಟಿವಿ ವರದಿ ಮಾಡಿದೆ.

ಫೆಬ್ರವರಿ 7 ರಂದು ಪಿಸಿಬಿ ಅಧಿಕೃತವಾಗಿ ನವೀಕರಿಸಿದ ಗಡಾಫಿ ಕ್ರೀಡಾಂಗಣವನ್ನು ತೆರೆಯಲಿದೆ. ಫೆ.11ರಂದು ನವೀಕರಿಸಿದ ಈ ಕ್ರೀಡಾಂಣಗವನ್ನು ಉದ್ಘಾಟನೆ ಮಾಡಲಾಗುವುದು. ಈ ಸಮಾರಂಭದಲ್ಲಿ ಅಧ್ಯಕ್ಷ ಆಸೀಪ್​ ಅಲಿ ಜಾರ್ಧರ್​ ಭಾಗವಹಿಸಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಪಿಸಿಬಿ ಮತ್ತು ಐಸಿಸಿ ನಾಯಕ ಪ್ರತಿಕಾಗೋಷ್ಠಿ ನಡೆಯಲಿದೆ. ಲಾಹೋರ್ ಕೋಟೆಯಲ್ಲಿರುವ ಹುಜೂರಿ ಬಾಗ್‌ನಲ್ಲಿ ಉದ್ಘಾಟನಾ ಸಮಾರಂಭವನ್ನು ನಿಗದಿಪಡಿಸಲಾಗಿದೆ, ಇದರಲ್ಲಿ ವಿವಿಧ ಮಂಡಳಿಗಳ ಅಧಿಕಾರಿಗಳು, ಸೆಲೆಬ್ರಿಟಿಗಳು, ಕ್ರಿಕೆಟ್​ ದಂತಕಥೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.

ಪಾಕಿಸ್ತಾನಕ್ಕೆ ತೆರಳಿದ್ದಾರೆಯೇ ರೋಹಿತ್​?

ಈಗಾಗಲೇ ನಿಗದಿಯಾಗಿರುವಂತೆ ಪಾಕಿಸ್ತಾನ ಮತ್ತು ಭಾರತ ಮಧ್ಯ ನಡೆಯುವ ಪಂದ್ಯಗಳನ್ನು ಹೈಬ್ರೀಡ್​ ಮಾದರಿಯಲ್ಲಿ ದುಬೈನಲ್ಲಿ ನಡೆಯುತ್ತೀವೆ. ಪಾಕಿಸ್ತಾನ ಈ ಬಾರಿ Champion Tropy 2025ರ ಅತಿಥ್ಯವಹಿಸಿರುವುದರಿಂದ ಲಾಹೋರ್​ನಲ್ಲಿ ನಡೆಯುವ ಉದ್ಘಾಟನೆ ಸಮಾರಂಭಕ್ಕೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮಾ ತೆರಳಿದ್ದಾರೆಯೇ ಎಂಬ ಪ್ರಶ್ನೆಗೆ ಭಾರತೀಯ ಕ್ರಿಕೆಟ್​ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಹಾಕಿಲ್ಲ. ಆದರೆ ಕೂಡಲೇ ಈ ಬಗ್ಗೆ ನಿರ್ಧಾರ ಹೊರ ಬೀಳಲಿದೆ ಎಂದು ಹೇಳಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net