IndvsWi | ಅರ್ಧ ಶತಕ ಅಪ್ಪನಿಗೆ..ಶತಕ ಸೈನ್ಯಕ್ಕೆ ಅರ್ಪಣೆ..:ಧ್ರುವ್ ಜುರೇಲ್​

Dhruv Jurel
Published on

IndvsWi: ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಪೂರೈಸಿದ ನಂತರ ಭಾರತದ ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ತಮ್ಮ ಸಂಭ್ರಮಾಚರಣೆಯನ್ನು ವಿಶೇಷವಾಗಿ ನಡೆಸಿದ್ದು, ತಮಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡರು.

ಇನ್ನಿಂಗ್ಸ್​​ ನಂತರ ಮಾತನಾಡಿದ ಜುರೇಲ್​, ಅರ್ಧಶತಕದ ಸಂಭ್ರಮಾಚರಣೆ ತನ್ನ ತಂದೆಗೆ ಮತ್ತು ಶತಕವನ್ನು ಭಾರತೀಯ ಸೇನೆಗೆ ಅರ್ಪಿಸಲಾಗಿದೆ ಎಂದು ಹೇಳಿದರು ಎಂದು ವರದಿಯಾಗಿದೆ. 210 ಎಸೆತಗಳಲ್ಲಿ 125 ರನ್ ಗಳಿಸಿದ ಜುರೆಲ್ ಇನ್ನಿಂಗ್ಸ್​ನಲ್ಲಿ 15 ಬೌಂಡರಿ ಮತ್ತು ಮೂರು ಮನಮೋಹಕ ಸಿಕ್ಸರ್‌ಗಳು ಸೇರಿವೆ. ಜುರೆಲ್, ಕನ್ನಡಿಗ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಶತಕದ ಬಲದಿಂದ ಭಾರತವು 2 ನೇ ದಿನದ ಅಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ 286 ರನ್‌ಗಳ ಮುನ್ನಡೆ ಸಾಧಿಸಿದೆ.

ನನಗೆ ಪ್ರತಿ ಸಲ ಆಡಲು ಸಾಧ್ಯವಾಗದಿದ್ದರು, ತಂಡಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುವುದು ನನ್ನ ಗುರಿಯಾಗಿದೆ, ಇದು ಶಿಸ್ತಿನ ಕೆಲಸವಾಗಿದ್ದು, ಅದಕ್ಕಾಗಿ ನಾನು ನನ್ನನ್ನು ಪ್ರೇರೇಪಿಸಿಕೊಳ್ಳುತ್ತೇನೆ ಎಂದರು. ರಿಷಭ್ ಪಂತ್ ಗಾಯಕ್ಕೆ ತುತ್ತಾಗಿರುವುದರಿಂದ ಜುರೆಲ್ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡುವ ಅವಕಾಶ ಪಡೆದರು. ಪಂತ್ ತಂಡಕ್ಕೆ ಮರಳಿದರೂ ಸಹ, ಜುರೆಲ್ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿವೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net