

INDVsPAK: ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯುತ್ತಿರುವ ಏಷ್ಯಾಕಪ್ - 2025 ಲೀಗ್ನ ಭಾರತ-ಪಾಕ್ ನಡುವಿನ ಎರಡನೇ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ನಾಯಕ ಸೂರ್ಯಕುಮಾರ್ ಯಾದವ್ ಈ ಭಾರಿಯೂ ಪಾಕ್ ಟೀಮ್ ಕ್ಯಾಪ್ಟನ್ ಅಘಾಗೆ ಹ್ಯಾಂಡ್ಶೇಕ್ ಮಾಡದೇ ತೆರಳಿದ್ದಾರೆ.
ಈ ಇದೀಗ ಭಾರತ-ಪಾಕ್ ಹ್ಯಾಂಡ್ಶೇಕ್ ವಿವಾದ ಸರದಿ ಮುಂದುವರಿದಿದೆ. ನಡೆಯುತ್ತಿರುವ ಟೂರ್ನಮೆಂಟ್ನಲ್ಲಿ ಇದು ಎರಡನೇ ಬಾರಿ ಎರಡೂ ತಂಡಗಳು ಪರಸ್ಪರ ಎದುರಾಗುತ್ತಿವೆ. ಹಿಂದಿನ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಸೋಲಿಸಿತು.
ಈ ಹಿಂದೆ ದುಬೈನಲ್ಲಿ ನಡೆದ ಭಾರತ-ಪಾಕ್ ನಡುವಣ ಪಂದ್ಯದ ಟಾಸ್ ಮತ್ತು ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಪಾಕ್ ಜತೆ ಹಸ್ತಲಾಘವ ಮಾಡೋದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆ ಭಾರತ ತಂಡದ ವಿರುದ್ಧ ಪಾಕ್ ಕ್ರಿಕೆಟ್ ಮಂಡಳಿ ಸೇರಿದಂತೆ ಪಾಕ್ನ ಮಾಜಿ ಆಟಗಾರರು ಕಿಡಿ ಕಾರಿದ್ದರು.