ಹ್ಯಾಂಡ್​ಶೇಕ್​ಗೆ ಒತ್ತಾಯಿಸಲು ರೆಫರಿ ಆಂಡಿ ಪೈಕ್ರಾಫ್ಟ್ ಶಾಲಾ ಮೇಷ್ಟ್ರು ಅಲ್ಲ: ಆರ್​.ಅಶ್ವಿನ್ ಗರಂ | Handshake

Untitled design - 2025-09-21T174416.420
Published on

Handshake: ಭಾರತ-ಪಾಕ್​ ಪಂದ್ಯದ ವೇಳೆ ಆಟಗಾರರನ್ನು ಹಸ್ತಲಾಘವಕ್ಕೆ ಒತ್ತಾಯಿಸಲು ರೆಫರಿ ಆಂಡಿ ಪೈಕ್ರಾಫ್ಟ್ ಶಾಲಾ ಶಿಕ್ಷಕನಲ್ಲ ಎಂದು ಭಾರತದ ಮಾಜಿ​ ಆಟಗಾರ ಆರ್​.ಅಶ್ವಿನ್​​ ಹೇಳಿದ್ದಾರೆ.

ಏಷ್ಯಾಕಪ್​-2025 ಲೀಗ್​ ದುಬೈನಲ್ಲಿ ನಡೆದ ಭಾರತ-ಪಾಕ್ ನಡುವಣ ಪಂದ್ಯದ ಟಾಸ್​ ಮತ್ತು ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಪಾಕ್ ಜತೆ ಹಸ್ತಲಾಘವ ಮಾಡೋದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆ ಭಾರತ ತಂಡ ಕ್ರೀಡಾಸ್ಫೂರ್ತಿ ಮರೆತಿದ್ದಾರೆ. ಅಲ್ಲದೆ, ರೆಫರಿ ಆಂಡಿ ಪೈಕ್ರಾಫ್ಟ್ ಕೂಡ ಭಾರತ ಪರ ಕೆಲಸ ಮಾಡುತ್ತಿದ್ದಾರೆ ಎಂದು ಪಿಸಿಬಿ ಆರೋಪಿಸಿತ್ತು.

ಆರ್​.ಅಶ್ವಿನ್​ ಹೇಳಿದ್ದೇನು?

ತಮ್ಮ ಯೂಟ್ಯೂಬ್ ಚಾನೆಲ್ ಆಶ್ ಕಿ ಬಾತ್​ನಲ್ಲಿ ಮಾತನಾಡಿದ ಅಶ್ವಿನ್​, ರೆಫರಿ ಆಂಡಿ ಪೈಕ್ರಾಫ್ಟ್ ಶಾಲಾ ಶಿಕ್ಷಕನಲ್ಲ. ಅವರು ಪ್ರಾಂಶುಪಾಲರಲ್ಲ. ಅವರು ಸೂರ್ಯ (ಸೂರ್ಯಕುಮಾರ್ ಯಾದವ್) ಅವರನ್ನು ಕರೆತಂದು 'ಹಸ್ತಲಾಘವ ಮಾಡಿ ಬನ್ನಿ' ಎಂದು ಹೇಳಲು ಸಾಧ್ಯವಿಲ್ಲ. ಅದು ಅವರ ಕೆಲಸವಲ್ಲ. ಇಲ್ಲಿ ಪೈಕ್ರಾಫ್ಟ್ ಅವರ ತಪ್ಪು ಏನು?" ಎಂದು ಭಾರತದ ಮಾಜಿ​ ಆಟಗಾರ ಆರ್​.ಅಶ್ವಿನ್​​ ಹೇಳಿದರು. ಈ ವಿವಾದದ ಮೂಲಕ ಪೈಕ್ರಾಫ್ಟ್ ಅನ್ನು ಬಲಿಪಶುವಾಗಿ ಬಳಸಿಕೊಂಡಿದ್ದಕ್ಕಾಗಿ ಅಶ್ವಿನ್ ಪಾಕಿಸ್ತಾನವನ್ನು ಟೀಕಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net