

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಲಂಕೇಶ್ ಕುಟುಂಬದ ಮೂರನೇ ತಲೆಮಾರಿನ ಕುಡಿ ಇದೀಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದೆ. ಪತ್ರಕರ್ತ ಲಂಕೇಶ್ ಅವರು "ಪಲ್ಲವಿ' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಕವಿತಾ ಲಂಕೇಶ್ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇಂದ್ರಜಿತ್ ಲಂಕೇಶ್ ಕೂಡ "ತುಂಟಾಟ', "ಮೊನಾಲಿಸಾ', "ಐಶ್ವರ್ಯಾ', "ಲವ್ ಯೂ ಆಲಿಯಾ' ಸೇರಿ 2020ರಲ್ಲಿ ಶಕೀಲಾ ಜೀವನಾಧಾರಿತ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸಿದ್ದಾರೆ. ಇದೀಗ ಇಂದ್ರಜಿತ್ ಪುತ್ರ ಸಮರ್ಜಿತ್ ಸ್ಯಾಂಡಲ್ವುಡ್ಗೆ ನಾಯಕನಾಗಿ ಎಂಟ್ರಿ ನೀಡಲು ರೆಡಿಯಾಗಿದ್ದಾರೆ. ವಿಶೇಷ ಅಂದರೆ ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಆ್ಯಕ್ಷನ್&ಕಟ್ ಹೇಳಲಿದ್ದಾರೆ.
ಸಮರ್ಜಿತ್ ಭರ್ಜರಿ ತಯಾರಿ
ಥಿಯೇಟರ್ ಸ್ಟಡಿಸ್ನಲ್ಲಿ ಪದವಿ ಪಡೆದು, ನ್ಯೂಯಾರ್ಕ್ನಲ್ಲಿ ನಟನೆಯ ವರ್ಕ್ಶಾಪ್ ಮಾಡಿರುವ ಸಮರ್ಜಿತ್, ಕೆಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ್ರೆಂಚ್ ನಿರ್ದೇಶಕರು, ವಿದೇಶಿ ತಂತ್ರಜ್ಞರ ಜತೆ ಕೆಲಸ ಮಾಡಿ ಅನುಭವ ಪಡೆದಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಗರಡಿಯಲ್ಲಿ ಆ್ಯಕ್ಷನ್, ಸ್ಟಂಟ್ಸ್ ಮತ್ತು ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಬಳಿ ಡಾನ್ಸ್ ಕಲಿಯುತ್ತಿದ್ದಾರೆ. ಮಾತ್ರವಲ್ಲದೇ ನಿನಾಸಂನ ನುರಿತ ರಂಗಭೂಮಿ ಕಲಾವಿದರ ಬಳಿಯೂ ನಟನಾ ತರಬೇತಿ ಪಡೆದಿದ್ದಾರೆ. ಯೋಗರಾಜ್ ಭಟ್ ಅವರ ಜತೆ ನಿರ್ದೇಶನಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಹೀಗೆ ಚಿತ್ರರಂಗಕ್ಕೆ ನಾಯಕನಾಗಿ ಬರಲು ಸಮರ್ಜಿತ್ ಸಾಕಷ್ಟು ತಯಾರಿ ನಡೆಸಿದ್ದಾರೆ. ಸೆ. 4ರಂದು ಸಿನಿಮಾ ಸೆಟ್ಟೇರಲಿದ್ದು, ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕಾವಾಲಯ್ಯ ಫೀವರ್: ಭರ್ಜರಿ ಸ್ಟೆಪ್ಸ್ ಹಾಕಿದ ಜಪಾನ್ ರಾಯಭಾರಿ
ಚೇತನ್ ಡಿಸೋಜಾ ಬಳಿ ಆ್ಯಕ್ಷನ್, ಮುರಳಿ ಮಾಸ್ಟರ್ ಬಳಿ ಡಾನ್ಸ್, ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ "ಗರಡಿ' ಮತ್ತು "ಕರಟಕ ದಮನಕ' ಚಿತ್ರಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ಕೆಲ ದಿನಗಳಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ. ಬಳಿಕ ಚಿತ್ರದ ತಾರಾಗಣ, ತಂತ್ರಜ್ಞರ ಕುರಿತು ಮಾಹಿತಿ ನೀಡಲಿದ್ದೇನೆ.
-ಇಂದ್ರಜಿತ್ ಲಂಕೇಶ್, ನಿರ್ದೇಶಕ