ನಾನು ಇಂದಿರಾ ನಗರದ 'ಗೂಂಡಿ' ಎಂದ ದೀಪಿಕಾ ಪಡುಕೋಣೆ!

Deepika
Published on

ಬೆಂಗಳೂರು: ನಿನ್ನೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಉಗ್ರಾವತಾರವನ್ನು ಎಲ್ಲರೂ ನೋಡುತ್ತಿದ್ದಾರೆ. ಕ್ರೆಡಿಟ್ ಕಾರ್ಡ್​ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿರುವ ರಾಹುಲ್, 'ನಾನು ಇಂದಿರಾ ನಗರದ ಗೂಂಡಾ' ಎಂದು ಅವಾಜ್ ಹಾಕಿದ್ದರು.

ರಾಹುಲ್​ರ ಈ ಹೇಳಿಕೆ ಸಕತ್ ವೈರಲ್ ಆಗಿದೆ. ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಮೆಮ್​ಗಳನ್ನು ಹರಿಬಿಡಲು, ಟ್ರೋಲ್ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದೀಗ ಇದನ್ನೇ ಬಳಸಿಕೊಂಡು ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮನ್ನೇ ತಾವು ಟ್ರೋಲ್ ಮಾಡಿಕೊಂಡಿದ್ದಾರೆ.

ಹೌದು, ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಬಾಲ್ಯದ ಚಂದದ ಫೋಟೋವನ್ನು ಹಂಚಿಕೊಂಡಿರುವ ದೀಪಿಕಾ ಪಡುಕೋಣೆ “Indiranagar ki gundi hoon main!” (ನಾನು ಇಂದಿರಾ ನಗರದ ಗೂಂಡಿ) ಎಂದು ರಾಹುಲ್ ದ್ರಾವಿಡ್ ಹೇಳಿಕೆಗೆ ಹೋಲಿಸಿಕೊಂಡು ಪೋಸ್ಟ್​ ಹಾಕಿದ್ದಾರೆ. ಕರ್ನಾಟಕ ಮೂಲದವರೇ ಆಗಿರುವ ದೀಪಿಕಾ ವಿಶೇಷವಾಗಿ ಬೆಂಗಳೂರಿನೊಂದಿಗೆ ನಂಟು ಹೊಂದಿದ್ದಾರೆ.

ದೀಪಿಕಾ ಅವರ ಈ ಪೋಸ್ಟ್​ಗೆ ಕೆಲವೇ ಗಂಟೆಗಳಲ್ಲಿ 15 ಲಕ್ಷ ಲೈಕ್​ಗಳು ಬಂದಿವೆ. ಬಾಯಲ್ಲಿ ಬೆರಳಿಟ್ಟುಕೊಂಡಿರುವ ಬೇಬಿ ದೀಪಿಕಾರನ್ನು ನೆಟ್ಟಿಗರು ಸಕತ್ ಇಷ್ಟಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net