More

    ಇಂಡಿಗೋ ಲಾಭ 111% ಹೆಚ್ಚಳ; ರೂ. 3300ರಿಂದ 4145ಕ್ಕೆ ಹೆಚ್ಚಲಿದೆ ಷೇರು ಬೆಲೆ: ಮೂರು ದಲ್ಲಾಳಿ ಸಂಸ್ಥೆಗಳ ಭವಿಷ್ಯ

    ಮುಂಬೈ: ಇಂಡಿಗೊ ಷೇರುಗಳು ಸೋಮವಾರ ಹೊಸ ಗರಿಷ್ಠ ಮಟ್ಟವನ್ನು ತಲುಪಿದವು. ಇಂಡಿಗೋ ಷೇರುಗಳು 4100 ರೂಪಾಯಿ ದಾಟಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಹೀಗಾಗಿ, ಈ ಕಂಪನಿಯ ಷೇರುಗಳನ್ನು ಖರೀದಿಸಲು ತಜ್ಞರು ಸಲಹೆ ನೀಡಿದ್ದಾರೆ.

    ಇಂಡಿಗೋ ಏರ್‌ಲೈನ್ಸ್ ಅನ್ನು ನಿರ್ವಹಿಸುವ ಇಂಟರ್‌ಗ್ಲೋಬ್ ಏವಿಯೇಷನ್‌ ಲಿಮಿಟೆಡ್​ (Interglobe Aviation Ltd.) ಷೇರುಗಳು ಸೋಮವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 5 ಕ್ಕಿಂತ ಹೆಚ್ಚು ಏರಿಕೆ ಕಂಡು 3301.40 ರೂ.ಗೆ ತಲುಪಿದ್ದವು.

    ಈ ಮೂಲಕ ಈ ಷೇರುಗಳು ಸೋಮವಾರ ತಮ್ಮ 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದವು. ಇಂಡಿಗೋ ಷೇರುಗಳಲ್ಲಿನ ಈ ತೀವ್ರ ಏರಿಕೆಯು ಡಿಸೆಂಬರ್ 2023 ರ ತ್ರೈಮಾಸಿಕದ ಉತ್ತಮ ಸಾಧನೆಯ ಹಿನ್ನೆಲೆಯಲ್ಲಿ ಕಂಡುಬಂದಿದೆ.

    ಇಂಡಿಗೋ ಷೇರುಗಳನ್ನು ಖರೀದಿಸಲು ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಿಮಾನಯಾನ ಸಂಸ್ಥೆಯ ಷೇರುಗಳು 4100 ರೂಪಾಯಿ ದಾಟಬಹುದು ಎಂದು ಅವರು ಅಂದಾಜಿಸಿದ್ದಾರೆ.

    ಮಾರ್ಗನ್ ಸ್ಟಾನ್ಲಿಯಿಂದ 4145 ರೂ. ಪ್ರೈಸ್​ ಟಾರ್ಗೆಟ್​:

    ಇಂಟರ್‌ಗ್ಲೋಬ್ ಏವಿಯೇಷನ್‌ ಲಿಮಿಟೆಡ್​ ಷೇರುಗಳ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಭಾರಿ ಏರಿಕೆಯಾಗಲಿದೆ ಎಂದು ವಿದೇಶಿ ಬ್ರೋಕರೇಜ್ (ದಲ್ಲಾಳಿ) ಸಂಸ್ಥೆಯಾದ ಮಾರ್ಗನ್ ಸ್ಟಾನ್ಲಿ ಅಂದಾಜಿಸಿದೆ. ಈ ಷೇರುಗಳಿಗೆ 4145 ರೂ. ತಲುಪಬಹುದು ಎಂದು ಮೋರ್ಗನ್ ಸ್ಟಾನ್ಲಿ ಹೇಳಿದೆ.

    ಇನ್ನು UBS ಸೆಕ್ಯುರಿಟೀಸ್ ಬ್ರೋಕರೇಜ್​ ಸಂಸ್ಥೆಯು ಇಂಡಿಗೋ ಷೇರುಗಳಿಗೆ ರೂ 3900 ಗುರಿ ಬೆಲೆಯನ್ನು ನೀಡಿದೆ. ಇಂಡಿಗೋ ಷೇರುಗಳನ್ನು ಖರೀದಿಸಲು ಯುಬಿಎಸ್ ಸಲಹೆ ನೀಡಿದೆ. ನುವಾಮಾ ಇನ್‌ಸ್ಟಿಟ್ಯೂಶನಲ್ ಬ್ರೋಕರೇಜ್​ ಸಂಸ್ಥೆ ಕೂಡ ಇಂಡಿಗೋ ಷೇರುಗಳನ್ನು ಖರೀದಿಸಲು ಸಲಹೆ ನೀಡಿದೆ. ಇಂಡಿಗೋ ಷೇರುಗಳ ಗುರಿ ಬೆಲೆಯನ್ನು 3774 ರೂ.ಗೆ ನುವಾಮಾ ಹೆಚ್ಚಿಸಿದೆ.


    ಇಂಡಿಗೋ ಲಾಭ 111% ಹೆಚ್ಚಳ:
    ಇಂಡಿಗೋ ಏರ್‌ಲೈನ್ಸ್‌ನ ಮಾತೃ ಸಂಸ್ಥೆ ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್​ ​​ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 2998.12 ಕೋಟಿ ರೂಪಾಯಿ ಲಾಭ ಗಳಿಸಿದೆ. ಇಂಡಿಗೋದ ತ್ರೈಮಾಸಿಕ ಲಾಭವು 111% ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಂಡಿಗೋ 1422.6 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಇಂಡಿಗೋ ಆದಾಯವು ಶೇಕಡಾ 30.3 ರಷ್ಟು ಏರಿಕೆಯಾಗಿದ್ದು, 19452.15 ಕೋಟಿ ರೂಪಾಯಿಗಳಿಗೆ ತಲುಪಿದೆ, ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 14933 ಕೋಟಿ ರೂಪಾಯಿಗಳಷ್ಟಿತ್ತು. ಡಿಸೆಂಬರ್ 2023 ತ್ರೈಮಾಸಿಕದಲ್ಲಿ ಇಂಡಿಗೋ ಕಾರ್ಯಾಚರಣೆಯ ಕಾರ್ಯಕ್ಷಮತೆಯಲ್ಲಿ ಉತ್ತಮ ಸುಧಾರಣೆ ಕಂಡುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts