More

    ಒಂದೇ ವರ್ಷದಲ್ಲಿ 873% ಲಾಭ ನೀಡಿದ ಷೇರು: ಸೋಮವಾರ 10% ಅಪ್ಪರ್​ ಸರ್ಕ್ಯೂಟ್​ ಹಿಟ್​ಗೆ ಕಾರಣವಾದ ಗುಡ್​ ನ್ಯೂಸ್​ ಏನು?

    ಮುಂಬೈ: ಸ್ಪೆಕ್ಟ್ರಮ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್​ ಲಿಮಿಟೆಡ್​ (Spectrum Electrical Industries Ltd.) ಷೇರು ಸೋಮವಾರ 10% ಅಪ್ಪರ್ ಸರ್ಕ್ಯೂಟ್ (ಒಂದು ದಿನದಲ್ಲಿ ಷೇರು ಬೆಲೆ ಗರಿಷ್ಠ ಹೆಚ್ಚಳವಾಗುವ ಮಿತಿ) ಹಿಟ್​ ಆಗಿದೆ.

    ಕಳೆದೊಂದು ವರ್ಷದಲ್ಲಿ 873% ಲಾಭ ನೀಡಿರುವ ಈ ಕಂಪನಿಯ ಷೇರು, ಹೊಸ ಸುದ್ದಿ ಬಂದ ತಕ್ಷಣ ಸೋಮವಾರ ಈ ಷೇರಿನ ಬೆಲೆ ಶೇಕಡಾ 10ರಷ್ಟು ಏರಿಕೆ ಕಂಡು, 1697.95 ರೂಪಾಯಿ ತಲುಪಿದೆ. ಒಂದು ಶುಭ ಸುದ್ದಿಯೇ ಈ ಕಾರಣ ಎಂದು ಹೇಳಲಾಗಿದೆ.

    ಏನು ಗುಡ್​ ನ್ಯೂಸ್​?:

    ಅಂಗ ಸಂಸ್ಥೆಯೊಂದನ್ನು ಸ್ಥಾಪಿಸುವುದಾಗಿ ಈ ಕಂಪನಿಯು ಫೆಬ್ರುವರಿ 4 ರಂದು ಷೇರು ಮಾರುಕಟ್ಟೆ ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿದೆ. ಈ ಅಂಗ ಸಂಸ್ಥೆಯು ವೈದ್ಯಕೀಯ ಸಾಧನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಿದೆ.
    ಈ ಅಂಗಸಂಸ್ಥೆಯ ಪ್ರಾಥಮಿಕ ಕೆಲಸವೆಂದರೆ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವುದು, ವಿನ್ಯಾಸಗೊಳಿಸುವುದು ಎಂದು. ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

    ಪ್ರಸ್ತುತ, ಸ್ಪೆಕ್ಟ್ರಮ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕಲ್, ಆಟೋಮೊಬೈಲ್ ಮತ್ತು ನೀರಾವರಿ ಘಟಕಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ತಯಾರಿಸುತ್ತದೆ. ಈ ವ್ಯವಹಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.

    ಈ ವರ್ಷ ಇಲ್ಲಿಯವರೆಗೆ ಕಂಪನಿಯ ಷೇರಿನ ಬೆಲೆ ಶೇಕಡಾ 18 ರಷ್ಟು ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪ್ರವರ್ತಕರ ಷೇರುಗಳ ಪ್ರಮಾಣ ಶೇಕಡಾ 3.43 ರಿಂದ 74.88 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಹಣಕಾಸು ವರ್ಷದ ಮೊದಲ 6 ತಿಂಗಳ ಅವಧಿಯಲ್ಲಿ ಕಂಪನಿಯ ಆದಾಯ 13.53 ಕೋಟಿ ರೂ. ಇದೆ. ಅದೇ ಅವಧಿಯಲ್ಲಿ ನಿವ್ವಳ ಲಾಭವು 7.07 ಕೋಟಿ ರೂ. ಇದೆ.

    ಕಂಪನಿಯ ಷೇರು ಬೆಲೆಗಳು ಕಳೆದ 6 ತಿಂಗಳಲ್ಲಿ 72.4 ಪ್ರತಿಶತದಷ್ಟು ಏರಿಕೆ ಕಂಡಿವೆ. ಒಂದು ತಿಂಗಳಲ್ಲಿ ಈ ಷೇರು ಬೆಲೆ ಶೇ.30ರಷ್ಟು ಹೆಚ್ಚಳವಾಗಿದೆ.

    Paytm ಷೇರು 3 ದಿನಗಳಲ್ಲಿ 41% ಕುಸಿತ: ಮುಖೇಶ ಅಂಬಾನಿ ಕಣ್ಣುಬಿದ್ದ ತಕ್ಷಣವೇ Jio ಫೈನಾನ್ಷಿಯಲ್ ಷೇರು ಒಂದೇ ದಿನದಲ್ಲಿ 14% ಏರಿಕೆ, ಏನಿದು ಲೆಕ್ಕಾಚಾರ?

    ಕೇವಲ 47 ದಿನಗಳಲ್ಲಿ 32 ರಿಂದ 204 ರೂಪಾಯಿಗೆ ಏರಿಕೆ: 650% ಲಾಭ ತಂದುಕೊಟ್ಟ ಸರ್ಕಾರಿ ಸಂಸ್ಥೆ ಷೇರು; ಸೋಮವಾರ ಸಾರ್ವಕಾಲಿಕ ಗರಿಷ್ಠ ಬೆಲೆಗೆ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts