More

    ಕೇವಲ 47 ದಿನಗಳಲ್ಲಿ 32 ರಿಂದ 204 ರೂಪಾಯಿಗೆ ಏರಿಕೆ: 650% ಲಾಭ ತಂದುಕೊಟ್ಟ ಸರ್ಕಾರಿ ಸಂಸ್ಥೆ ಷೇರು; ಸೋಮವಾರ ಸಾರ್ವಕಾಲಿಕ ಗರಿಷ್ಠ ಬೆಲೆಗೆ ಮಾರಾಟ

    ಮುಂಬೈ: IREDA ಲಿಮಿಟೆಡ್​ (Indian Renewable Energy Development Agency Ltd) ಷೇರುಗಳು ಕೇವಲ 47 ವಹಿವಾಟು ದಿನಗಳಲ್ಲಿ 32 ರೂಪಾಯಿಗೆ 204 ರೂಪಾಯಿಗೆ ಏರಿಕೆ ಕಂಡಿವೆ. ಈ ಮೂಲಕ ಈ ಅವಧಿಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ಈ ಸರ್ಕಾರಿ ಷೇರುಗಳ ಬೆಲೆ ಕೆಲ ದಿನಗಳಿಂದ ಏರುಗತಿಯಲ್ಲಿದ್ದು, ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

    ಕಳೆದ ನವೆಂಬರ್​ 21ರಿಂದ 23ರ ನಡುವೆ ಈ ಷೇರುಗಳನ್ನು ಐಪಿಒ ಮೂಲಕ ಹಂಚಿಕೆ ಮಾಡಲಾಗಿತ್ತು. ಸಾರ್ವಜನಿಕ ಷೇರುಗಳ ವಿತರಣೆಯ ಒಟ್ಟು ಗಾತ್ರ 2150.21 ಕೋಟಿ ರೂ. ಇತ್ತು. ಈ ಐಪಿಒ ಒಟ್ಟು 38.80 ಬಾರಿ ಚಂದಾದಾರಿಕೆಯಾಗಿತ್ತು. ಆಗ ಒಂದು ಷೇರಿಗೆ 32 ರೂಪಾಯಿ ಬೆಲೆ ನಿಗದಿಪಡಿಸಲಾಗಿತ್ತು. ನವೆಂಬರ್​ 29ರಂದು ಷೇರು ಮಾರುಕಟ್ಟೆಯಲ್ಲಿ ಮೊದಲ ದಿನವೇ 50 ರೂಪಾಯಿ ಬೆಲೆಗೆ ಇದನ್ನು ಪಟ್ಟಿ ಮಾಡಲಾಗಿತ್ತು. ನಂತರ ಕೇವಲ 47 ದಿನಗಳಲ್ಲಿ ಈ ಷೇರುಗಳ ಬೆಲೆ ಈಗ 200 ರೂಪಾಯಿ ದಾಟಿದೆ. ಅಂದರೆ ಈ ಅವಧಿಯಲ್ಲಿ ಅಂದಾಜು ಶೇಕಡಾ 650ರಷ್ಟು ಹೆಚ್ಚಳ ಕಂಡಿದೆ.

    ಸೋಮವಾರ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಶೇಕಡಾ 5ರಷ್ಟು ತೀವ್ರ ಏರಿಕೆಯೊಂದಿಗೆ 204.80 ರೂ.ಗೆ ತಲುಪಿತ್ತು. ಈ ಮೂಲಕ 52 ವಾರಗಳ ಹೊಸ ಗರಿಷ್ಠ ಮಟ್ಟದ ಬೆಲೆಯನ್ನು ಮುಟ್ಟಿತ್ತು. ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐಆರ್‌ಇಡಿಎ) ಷೇರುಗಳ ಬೆಲೆ ಐಪಿಒ ಬೆಲೆಗಿಂತ 6.5 ಪಟ್ಟು ಹೆಚ್ಚಾಗಿದೆ.

    15 ಮ್ಯೂಚುಯಲ್ ಫಂಡ್‌ಗಳು ಈ ಸರ್ಕಾರಿ ಕಂಪನಿಯಲ್ಲಿ 2.87% ಪಾಲನ್ನು ಹೊಂದಿವೆ. ಈ ಕಂಪನಿಯಲ್ಲಿ ಸರ್ಕಾರದ ಪಾಲು ಶೇಕಡಾ 75 ರಷ್ಟಿದೆ.

    ಐಆರ್‌ಇಡಿಎ ಲಿಮಿಟೆಡ್​ ಕಂಪನಿಯು ಭಾರತೀಯ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಇಂಧನ ಮತ್ತು ಶಕ್ತಿಯ ನವೀಕರಿಸಬಹುದಾದ ಮೂಲಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಹಣಕಾಸಿನ ನೆರವು ಮತ್ತು ಇತರ ಸೇವೆಗಳನ್ನು ಒದಗಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts