More

    ಏಷ್ಯನ್​ ಗೇಮ್ಸ್​; ಶಾಟ್​ಪುಟ್​ನಲ್ಲಿ ಭಾರತದ ತಜಿಂದರ್​ಪಾಲ್​ ಸಿಂಗ್ ತೂರ್​ಗೆ ಸ್ವರ್ಣ

    ನವದೆಹಲಿ: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು, ಶಾಟ್​ಪುಟ್​ನಲ್ಲಿ ಹಾಲಿ ಚಾಂಪಿಯನ್ ತಜಿಂದರ್​ಪಾಲ್​ ಸಿಂಗ್ ತೂರ್​​ ಚಿನ್ನದ ಪದಕ ಗೆದ್ದಿದ್ದಾರೆ.

    ಪುರುಷರ ಶಾಟ್‌ಪುಟ್ ಫೈನಲ್‌ನಲ್ಲಿ ತನ್ನ ಆರನೇ ಹಾಗೂ ಅಂತಿಮ ಪ್ರಯತ್ನದಲ್ಲಿ ಶಾಟ್‌ಪುಟ್ಅನ್ನು 20.36 ಮೀಟರ್​ ದೂರ ಎಸೆಯುವ ಮೂಲಕ ಜಾಲಿ ಚಾಂಪಿಯನ್ ತಜಿಂದರ್​ಪಾಲ್​ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

    ತಜಿಂದರ್​ಪಾಲ್​ ಸಿಂಗ್ ​ ಗೆಲುವಿನೊಂದಿಗೆ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. 13 ಚಿನ್ನ, 19 ಬೆಳ್ಳಿ, 19 ಕಂಚಿನ ಪದಕಗಳು ಈವರೆಗೆ ಭಾರತದ ಪಾಲಾಗಿವೆ. ಪದಕಗಳ ಗಳಿಕೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts