

ಚೆನ್ನೈ: ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ ಬಾಲಿವುಡ್ನ ನಟಿ ಜೂಹಿ ಚಾವ್ಲಾ ಬರೊಬ್ಬರಿ 4600 ಕೋಟಿ ರೂ. ನಿವ್ವಳ ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಭಾರತದ ಯಾವುದೇ ನಟಿಯ ಆಸ್ತಿಯೂ 1000 ಕೋಟಿ ರೂ. ಗಡಿಯನ್ನು ತಲುಪಿಲ್ಲ. ಆದರೆ ಸರಿಸುಮಾರು ಮೂರು ದಶಕಗಳ ಹಿಂದಿನದನ್ನೂ ಗಣನೆಗೆ ತೆಗೆದುಕೊಂಡರೆ ಜೂಹಿ ಚಾವ್ಲಾ ಅವರನ್ನು ಮೀರಿಸುವ ಶ್ರೀಮಂತ ನಟಿಯೊಬ್ಬರು(Richest Actress) ಇದ್ದರು.
ಕೇವಲ ಹಣದಿಂದ ಮಾತ್ರವಲ್ಲ ವಾರ್ಡ್ರೋಬ್ನಲ್ಲಿದ್ದ ಬಟ್ಟೆ ಮತ್ತು ಆಭರಣಗಳು ಆಕೆಯ ಐಶ್ವರ್ಯವನ್ನು ಹೆಚ್ಚಿಸಿದ್ದವು. ಆ ವೈಭವವು ರಾಜಮನೆತನವನ್ನು ನಾಚಿಕೆ ಪಡಿಸುವಂತಿತ್ತು. ನಾವು ಹೇಳುತ್ತಿರುವುದು ತಮಿಳು ಚಲನಚಿತ್ರದ ಐಕಾನ್ ಜಯಲಲಿತಾ ಅವರ ಬಗ್ಗೆ. ಹೌದು ಆ ಕಾಲದ ಯಶಸ್ವಿ ತಾರೆಗಳಲ್ಲಿ ಇವರೂ ಅಗ್ರಸ್ಥಾನದಲ್ಲಿದ್ದಾರೆ. ಎರಡು ದಶಕಗಳ ಕಾಲದ ವೃತ್ತಿಜೀವನದಲ್ಲಿ ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಅಗ್ರ ಸ್ಥಾನದಲ್ಲಿದ್ದ ಜಯಲಲಿತಾ ಅವರು ಕೆಲ ಬಾಲಿವುಡ್ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ.
ಜಯಲಲಿತಾ ಅವರು ಗಳಿಸಿದ ಸಂಪತ್ತು ಸಿನಿಮಾಗಳಿಂದ ಬಂದದಲ್ಲ ಬದಲಾಗಿ ಅವರು ರಾಜಕೀಯಕ್ಕೆ ಸೇರಿದ ನಂತರ ಬಂದದ್ದು ಎಂದು ಹೇಳಲಾಗುತ್ತದೆ. 1980ರ ದಶಕದಲ್ಲಿ ಜಯಲಲಿತಾ ಅವರು ತಮ್ಮ ಆಪ್ತ ಎಂಜಿ ರಾಮಚಂದ್ರನ್ ಅವರನ್ನು ಅನುಸರಿಸಿ ಅವರ ಪಕ್ಷವಾದ ಎಐಎಡಿಎಂಕೆಗೆ ಸೇರಿದರು. ರಾಜ್ಯಸಭಾ ಸಂಸದೆಯಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿದ ನಂತರ, ಅವರು ಮತ್ತೆ ರಾಜ್ಯ ರಾಜಕೀಯಕ್ಕೆ ತೆರಳಿದರು. ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಈ ಮಧ್ಯೆ ಜಯಲಲಿತಾ ಅವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದರು. ಅವರು ತಮ್ಮ ಆದಾಯಕ್ಕೆ ಮೀರಿದ ಆಸ್ತಿಯನ್ನು ಸಂಗ್ರಹಿಸಿದ್ದರು ಎಂಬ ಅನೇಕ ಆರೋಪಗಳನ್ನು ಎದುರಿಸಬೇಕಾಯಿತು. 1997ರಲ್ಲಿ ಚೆನ್ನೈನಲ್ಲಿರುವ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಅಧಿಕಾರಿಗಳು 900 ಕೋಟಿ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ್ದರು. ನಗದು ಮಾತ್ರವಲ್ಲದೆ 10,500 ಸೀರೆಗಳು, 750 ಜೋಡಿ ಪಾದರಕ್ಷೆಗಳು, 91 ಕೈಗಡಿಯಾರಗಳು, 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನ ಸೇರಿದಂತೆ ಕೆಲವು ಸಂಪತ್ತು ಪತ್ತೆಯಾಗಿತ್ತು. ಅಷ್ಟೆ ಅಲ್ಲ ಮತ್ತೊಮ್ಮೆ ತನಿಖೆಯ ಭಾಗದಲ್ಲಿ 1250 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನ ಪತ್ತೆಯಾಗಿದ್ದಾಗಿ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಪ್ರಸ್ತುತ ಅಂಕಿ ಅಂಶದ ಪ್ರಕಾರ ಅಂದು ಪತ್ತೆಯಾದ ಸಂಪತ್ತು ಸುಮಾರು 5000 ಕೋಟಿ ರೂಪಾಯಿಯಷ್ಟಿತ್ತು. ಇದು ಜೂಹಿ ಚಾವ್ಲಾ ಅವರ ಸಂಪತ್ತಿಗಿಂತ ಹೆಚ್ಚಾಗಿದೆ.
30ರ ದಶಕದಲ್ಲಿ ಟಾಪ್ ಸ್ಟಾರ್ ಆಗಿ ಉತ್ತುಂಗದಲ್ಲಿದ್ದ ಜಯಲಲಿತಾ ಅವರು ಚಿತ್ರರಂಗವನ್ನು ತೊರೆದರು. ಆದರೆ ಬಳಿಕ ತನ್ನ ಹೆಸರಿನಲ್ಲಿ ಅಥವಾ ಅವರಿಂದ ಸ್ಫೂರ್ತಿ ಪಡೆದ ಪಾತ್ರವಾಗಿ ಮಾತ್ರ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡರು. ಅವರನ್ನು ಒಳಗೊಂಡ ಕನಿಷ್ಠ ಏಳು ಬಯೋಪಿಕ್ ಮಾಡುವುದಾಗಿ ಹೇಳಲಾಗಿತ್ತು. ಆದರೆ ಕೆಲವು ರಾಜಕೀಯ ವಿರೋಧದ ಕಾರಣದಿಂದಾಗಿ ಆ ಬಯೋಪಿಕ್ ಸಿನಿಮಾಗಳು ಬಿಡುಗಡೆಯಾಗಲಿಲ್ಲ. ಕೊನೆಗೂ ಜಯಲಲಿತಾ ಅವರ ಅಧಿಕೃತ ಜೀವನಚರಿತ್ರೆ ಬಯೋಪಿಕ್ ಕಂಗನಾ ರಣಾವತ್ ನಟಿಸಿದ ಸಿನಿಮಾ ತಲೈವಿ 2021ರಲ್ಲಿ ಬಿಡುಗಡೆಗೊಂಡಿತು. (ಏಜೆನ್ಸೀಸ್)