ಭಾರತದ ಜಿ-20 ಪ್ರೆಸಿಡೆನ್ಸಿಯ ಸಭೆ ದೇವನಹಳ್ಳಿಯಲ್ಲಿ ಆರಂಭ

g20 summit devanahlli
Published on

ಬೆಂಗಳೂರು: ಭಾರತದ ಜಿ20 ಪ್ರೆಸಿಡೆನ್ಸಿಯ ಮೊದಲ ಹಣಕಾಸು ಟ್ರ್ಯಾಕ್ (FT) ಈವೆಂಟ್- ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟೀಸ್ (FCBD) ಸಭೆ ಇಂದು(ಡಿ.13) ದೇವನಹಳ್ಳಿಯ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್​ನಲ್ಲಿ ಆರಂಭಗೊಂಡಿದೆ.

ಡಿ.15ರವರೆಗೆ ನಡೆಯಲಿರುವ ಈ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳ 200ಕ್ಕೂ ಅಧಿಕ ಅಧಿಕಾರಿಗಳು ಭಾಗವಹಿಸಿದ್ದಾರೆ. ಇಲ್ಲಿ ಭಾರತದ ಆದ್ಯತೆಗಳು ಅನಾವರಣಗೊಳ್ಳಲಿವೆ. ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಜಾಗತಿಕ ಆರ್ಥಿಕತೆ, ಮೂಲಸೌಕರ್ಯ ಹೂಡಿಕೆ, ಸುಸ್ಥಿರ ಹಣಕಾಸು, ಅಂತಾರಾಷ್ಟ್ರೀಯ ತೆರಿಗೆ, ಆರೋಗ್ಯ ಮತ್ತು ಹಣಕಾಸು, ಹಣಕಾಸು ವಲಯದ ನಿಯಂತ್ರಕ ಸಮಸ್ಯೆಗಳು ಮತ್ತು ಹಣಕಾಸು ಸೇರ್ಪಡೆ ಸೇರಿ ಎಂಟು ಕಾರ್ಯಸೂಚಿಯನ್ನು ಹೊಂದಿದೆ.

ಇನ್ನು ಈ ಸಭೆಗೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಎರಡು ಆನೆಗಳನ್ನೂ ಹೋಟೆಲ್​ ಆವರಣಕ್ಕೆ ಕರೆತರಲಾಗಿತ್ತು. ಯಕ್ಷಗಾನ ಕಲಾವಿದರು ಗಣ್ಯರ ಸ್ವಾಗತಕ್ಕೆ ಸಂಪ್ರದಾಯದಯಿಕ ಮೆರುಗು ನೀಡಿದರು. ಸಿರಿಧಾನ್ಯ, ಹೂವಿನಿಂದ ಬಿಡಿಸಿರುವ ರಂಗೋಲಿ ಗಣ್ಯರ ಮನಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net