

ನವದೆಹಲಿ: ಸೂಪರ್ಕಾರು ರೇಸರ್ ಆಗಿದ್ದು ಇದೀಗ ನೀಲಿಚಿತ್ರಗಳ ತಾರೆಯಾಗಿ ಪರಿವರ್ತನೆಗೊಂಡಿರುವ ರೀನಿ ಗ್ರೇಸಿ ಭಾರತೀಯರ ಮೇಲೆ ಕೆಂಡ ಕಾರುತ್ತಿದ್ದಾರೆ. ತಮ್ಮ ಫೋಟೋಗಳನ್ನು ಬಳಸಿಕೊಂಡು, ನಕಲಿ ವೆಬ್ಪೇಜ್ ನಿರ್ಮಿಸುತ್ತಿರುವುದು ಇವರ ಕೋಪಕ್ಕೆ ಕಾರಣವಾಗಿದೆ. ಆದ್ದರಿಂದ ಅವರು, ಭಾರತೀಯರೇ, ನನ್ನ ಪೇಜ್ ಬಿಟ್ಟು ತೊಲಗಿ... ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ಪೋರ್ನ್ ಚಿತ್ರಗಳೆಲ್ಲವೂ ಕಾಪಿರೈಟ್ಗೆ ಒಳಪಟ್ಟಿವೆ. ಅನುಮತಿ ಇಲ್ಲದೆ ಇವನ್ನು ಬಳಸುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭಾರತೀಯರು ನನ್ನ ಚಿತ್ರಗಳನ್ನು ಅಕ್ರಮವಾಗಿ ಕದ್ದು, ಪ್ರತ್ಯೇಕವಾದ ವೆಬ್ಪೇಜ್ಗಳನ್ನು ರಚಿಸಿಕೊಂಡು ವಂಚಿಸುತ್ತಿದ್ದಾರೆ. ಆದ್ದರಿಂದ, ನನ್ನ ವೆಬ್ಪೇಜ್ನಲ್ಲಿರುವ ಎಲ್ಲ ಭಾರತೀಯರನ್ನು ಗುರುವಾರ ರಾತ್ರಿ ಕಿತ್ತೊಗೆಯಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನನಗೆ ಈಗ ಭಾರತೀಯರನ್ನು ಕಂಡರೆ ಅಸಹ್ಯವಾಗುತ್ತಿದೆ... ನೀವೇನಾದರೂ ನನ್ನ ಚಿತ್ರಗಳನ್ನು ಕದ್ದಿದ್ದರೆ ಅಥವಾ ಅಕ್ರಮವಾಗಿ ಶೇರ್ ಮಾಡಿದ್ದರೆ, ನಿಮ್ಮ ಮುಖಕ್ಕೆ ಇಷ್ಟು... ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ... ಇನ್ಮುಂದೆ ಭಾರತೀಯರಿಗೆ ಯಾರಿಗೂ ನನ್ನ ಪೇಜ್ಗೆ ಆಹ್ವಾನವಿಲ್ಲ... ನನ್ನ ಪೇಜ್ನಿಂದ ಎಲ್ಲ ಭಾರತೀಯರನ್ನೂ ಇಂದು ರಾತ್ರಿ ಕಿತ್ತೊಗೆಯಲಿದ್ದೇನೆ... ಎಂದು ತಮ್ಮ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
14 ವರ್ಷ ಸರ್ವ ಮಹಿಳಾ ಸೂಪರ್ಕಾರು ರೇಸರ್ ಆಗಿದ್ದೂ ಹೆಚ್ಚಿನ ಆದಾಯ ಗಳಿಸಿಕೊಳ್ಳಲು ರೀನಿ ಗ್ರೇಸಿ ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಆ ವೃತ್ತಿಯನ್ನು ಬಿಟ್ಟು ಅವರು ನೀಲಿಚಿತ್ರ ತಾರೆಯಾಗಿ ರೂಪಾಂತರಗೊಂಡಿದ್ದಾರೆ. ಇದೀಗ ತಮ್ಮ ವೆಬ್ಪೇಜ್ನಲ್ಲಿ ಪ್ರಚೋದನಾಕಾರಿ ಫೋಟೋಗಳು ಹಾಗೂ ವಿಡಿಯೋಗಳನ್ನು ಪ್ರಕಟಿಸುವ ಮೂಲಕ ವಾರಕ್ಕೆ 20 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
ತಮ್ಮ ಈ ಗಳಿಕೆಯಿಂದ ಇದೀಗ 30 ವರ್ಷಗಳಷ್ಟು ಹಳೆಯ ಸಾಲವನ್ನು ಇನ್ನೊಂದು ವರ್ಷದಲ್ಲಿ ತೀರಿಸುವುದಾಗಿ ಹೇಳಿಕೊಂಡಿದ್ದಾರೆ.