More

    ತಡ್ಕೊಳ್ಳೋಕಾಗದೆ ಯುವತಿ ತುಟಿಗೆ ಕಿಸ್ ಕೊಟ್ಟು ಕೆಟ್ಟ ಮಧ್ಯವಯಸ್ಕ

    ಲಂಡನ್​: ಇತಿಹಾಸದ ಪುಟಗಳನ್ನು ಗಮನಿಸಿದರೆ, ಪುರಾಣಗಳನ್ನು ಗಮನಿಸಿದರೆ ರಾಜಕಾರಣದಲ್ಲಿ ವಿಷ ಕನ್ಯೆ ಎಂಬೊಂದು ಪದ ಗಮನಸೆಳೆಯದೇ ಉಳಿಯದು. ಹೌದು ಇಂಥದ್ದೊಂದು ವಿಚಾರದ ಬಗ್ಗೆ ಗಮನ ಹರಿಸುವಂತೆ ಮಾಡುತ್ತದೆ ಈ ಸುದ್ದಿ. ಆತ 45 ವರ್ಷ ವಯಸ್ಸಿನ ವ್ಯಕ್ತಿ. ಡೇಟಿಂಗ್ ವೆಬ್​ಸೈಟ್ ಒಂದರಲ್ಲಿ ಒಬ್ಬಾಕೆಯನ್ನು ನೋಡಿ ಅನುರಕ್ತನಾಗಿಬಿಟ್ಟ. ಆಕೆಯ ಜತೆಗೆ ಡೇಟಿಂಗ್​ಗೆ ಡೇಟ್​ ಫಿಕ್ಸ್ ಮಾಡಿದ. ರೊಮ್ಯಾಂಟಿಕ್ ಡೇಟಿಂಗ್ ಬಳಿಕ ಆತನ ಬದುಕೇ ಬದಲಾಗಿಬಿಟ್ಟಿತು.

    ಲಂಡನ್​ನ ಮಾರ್ಟಿನ್ ಆಶ್ಲೆ ಕನ್ವೇ (45) ಎಂಬಾತನೇ ಈ ಸುದ್ದಿಯ ಕೇಂದ್ರ ಬಿಂದು. ಆತನ ಮಾತುಗಳಲ್ಲೇ ಹೇಳುವುದಾದರೆ, ” ಬದುಕು ಬಹಳ ಬೇಸರವಾಗಿತ್ತು. ಸಖಿಯ ಸಹವಾಸಬೇಕೆಂಬ ಕಾರಣಕ್ಕೆ ಡೇಟಿಂಗ್ ಸೈಟ್ ಮೊರೆ ಹೋಗಿದ್ದೆ. ಅಲ್ಲಿ ಜೋವಾನ್ನ ಲವ್​ಲೇಸ್ ಎಂಬಾಕೆಯ ಪರಿಚಯ ಆಯಿತು. ಡೇಟಿಂಗ್ ಫಿಕ್ಸ್ ಆಯಿತು. ಆಕೆಯ ಜೊತೆಗಿನ ಡೇಟಿಂಗ್ ಬಹಳ ರೊಮ್ಯಾಂಟಿಕ್ ಆಗಿತ್ತು. ಖುಷಿ, ಸಂಭ್ರಮದಿಂದ ಆಕೆಯ ತುಟಿಗೊಂದು ಕಿಸ್ ಕೂಡ ಕೊಟ್ಟಿದ್ದೆ. ಆಕೆಯ ಸಹವಾಸ ಇಷ್ಟವಾಗಿ ಒಂದು ರಾತ್ರಿ ಜೊತೆಗೂ ಕಳೆದೆವು. ಬೆಳಗ್ಗೆ ಭಾರವಾದ ಹೃದಯದೊಂದಿಗೆ ಆಕೆಯನ್ನು ಬೀಳ್ಕೊಟ್ಟೆ.

    1.30 ಕೋಟಿ ರೂಪಾಯಿಗೂ ಅಧಿಕ ಪರಿಹಾರ ಬೇಕಂತೆ

    ಸರ್ಪಸುತ್ತು ಸೋಂಕು ಹರಡಿದ ಡೇಟಿಂಗ್ ಕನ್ಯೆ ಈಗ ಪರಿಹಾರವಾಗಿ 1.30 ಕೋಟಿ ರೂಪಾಯಿಗೂ ಹೆಚ್ಚು ನೀಡಬೇಕು. ಎಂಬುದು ಮಾರ್ಟಿನ್ ಆಶ್ಲೆ ಕನ್ವೇ ವಾದ. ಈಗ ಪ್ರತಿ ಹದಿನೈದು ದಿನಕ್ಕೊಮ್ಮೆ ಈ ಸೋಂಕಿಗೆ ಚಿಕಿತ್ಸೆಪಡೆಯಬೇಕಾಗಿದೆ. ಇದಕ್ಕೆ ಒಂದು ಕೋಟಿ ರೂಪಾಯಿಗೂ ಅಧಿಕ ಖರ್ಚಾಗಲಿದೆ. ಬಹುಶಃ ನನಗೆ 79 ವರ್ಷ ವಯಸ್ಸಾಗುವ ತನಕವೂ ಈ ಚಿಕಿತ್ಸೆ ಮುಂದುವರಿಯಬಹುದು. ಅನಾರೋಗ್ಯ ಕಾರಣಕ್ಕೆ ನಾನು ಕೆಲಸ ಕಳೆದುಕೊಂಡಿದ್ದು, ಆದಾಯ ರಕ್ಷಣೆ ವಿಮೆಯೂ ಸಿಗದಿದ್ದರೆ ಕಷ್ಟವಾದೀತು ಎಂಬ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ಪರಿಹಾರ ಕೇಳುತ್ತಿದ್ದೇನೆ ಎಂಬುದು ಮಾರ್ಟಿನ್ ಆಶ್ಲೆ ಕನ್ವೇಯ ವಾದ.

    ತಡ್ಕೊಳ್ಳೋಕಾಗದೆ ಯುವತಿ ತುಟಿಗೆ ಕಿಸ್ ಕೊಟ್ಟು ಕೆಟ್ಟ ಮಧ್ಯವಯಸ್ಕಇಲ್ಲಿ ತನಕ ಎಲ್ಲವೂ ಸರಿಯಾಗೇ ಇತ್ತು. ಮಾರನೇ ದಿನ ಲೈಟಾಗಿ ಜ್ವರ ಶುರುವಾಯಿತು. ಫ್ಲೂ ಮಾದರಿಯ ಗುಣಲಕ್ಷಣ ಗೋಚರಿಸಿತು. ಬಾಯಿ ತುಂಬಾ ಅಲರ್ಜಿ ಕಾಣಿಸಿತು. ತಿಂದು ಉಂಡು ಮಾಡೋದಕ್ಕೆ ಆಗದಂತೆ ನೋವು ಕಾಣಿಸಿತು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾದೆ. ಸರ್ಪಸುತ್ತು ಕಾಯಿಲೆ ತರುವ ವೈರಸ್​ ಸೋಂಕಿಗೆ ಒಳಗಾಗಿರುವ ವಿಚಾರ ದೃಢವಾಯಿತು. ಪರಿಸ್ಥಿತಿ ಎಲ್ಲಿತನಕ ಮುಟ್ಟಿತು ಎಂದರೆ ಹೊರಗೆ ಹೋಗುವುದಕ್ಕೂ ನಾಚಿಕೆಯಾಗತೊಡಗಿತು. ಮನೆ ಮತ್ತು ಆಸ್ಪತ್ರೆ ಎಂದು ಕೆಲವು ದಿನಗಳ ಕಾಲ ಉಳಿಯುವಂತಾಯಿತು. ಬಹಳಷ್ಟು ಖಿನ್ನತೆ ಕಾಡಿತ್ತು.

    ಇದನ್ನೂ ಓದಿ: VIDEO|ಗಡ್ಡ ಪ್ರಿಯರು ತಲೆ ಕೆಡಿಸಿಕೊಳ್ಳಬೇಕಾದ ಸುದ್ದಿ!

    ಸೋಂಕು ಹರಡುವುದಕ್ಕೆ ಕಾರಣವೇನು ಎಂದು ವಿಶ್ಲೇಷಿಸಿದಾಗ ಕಿಸ್ ಮಾಡಿರುವ ವಿಚಾರ ಪ್ರಸ್ತಾಪವಾಯಿತು. ಡೇಟಿಂಗ್ ಕನ್ಯೆಯ ತುಟಿಯ ಮೂಲಕವೇ ಸೋಂಕು ಹರಡಿರಬಹುದೆಂಬುದು ಖಚಿತವಾಯಿತು. ಒಂದೊಮ್ಮೆ ಆಕೆ ತನಗೆ ಸೋಂಕಿರುವ ವಿಚಾರ ಮೊದಲೇ ಹೇಳಿದ್ದರೆ ನಾನು ಆಕೆಯ ತುಟಿಯನ್ನು ಚುಂಬಿಸುತ್ತಿರಲಿಲ್ಲ. ನನ್ನ ಬದುಕನ್ನೇ ನಾಶಮಾಡಿಬಿಟ್ಟಳಾಕೆ. ಆಕೆ ಇದಕ್ಕೆ ಪರಿಹಾರ ಕೊಡಲೇ ಬೇಕು”.

    ಡೇಟಿಂಗ್​ ಸೈಟ್​ಗೆ ಹೋಗಿ ಪರಸ್ಪರ ಮಾತನಾಡಿಕೊಂಡು ಡೇಟಿಂಗ್ ಫಿಕ್ಸ್ ಮಾಡಿ ಎಲ್ಲ ಮುಗಿದ ಬಳಿಕ ಅದೇ ಮಹಿಳೆಯ ವಿರುದ್ಧ ಕೇಸ್ ದಾಖಲಿಸಿ ಪರಿಹಾರ ಕೇಳುವ ಮಟ್ಟಕ್ಕೆ ಹೋದ ಈ ವ್ಯಕ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

    ಜಿಯೋ ಪ್ಲಾಟ್​ಫಾರಂನಲ್ಲಿ ಹೂಡಿಕೆಯಾಗ್ತಿದೆ ಸೌದಿ ಸಂಪತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts