ಲಂಡನ್ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ನಿಟ್ಟೆಯ ಬೆಡಗಿ

fashion
Published on

ಕಾರ್ಕಳ: ಇಂಡಿಯನ್ ಡಿಜಿಟಲ್ ಕ್ರಿಯೇಟರ್ ಶ್ರೀಮಾ ರೈ, ಲಂಡನ್ ಫ್ಯಾಷನ್ ವೀಕ್‌ನಲ್ಲಿ ತನ್ನ ಆಕರ್ಷಕ ರನ್‌ವೇ ನಡೆ ಮೂಲಕ ಮೌಕ್ತಿಕ ಕಲೆಕ್ಷನ್ ಬ್ರಾೃಂಡ್‌ನ ಚೊಚ್ಚಲ ಪ್ರದರ್ಶನದ ರೂಪದರ್ಶಿಯಾಗಿ ಮಿಂಚಿದ್ದಾರೆ.
ಮಾಜಿ ಬ್ಯಾಂಕರ್, ಮಿಸೆಸ್ ಇಂಡಿಯಾ ಗ್ಲೋಬ್, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಇನ್‌ಸ್ಟಾಗ್ರಾಂ ಮೂಲಕ ಖ್ಯಾತಿ ಪಡೆದ ಶ್ರೀಮಾ ರೈ, ಇಬ್ಬರು ಮಕ್ಕಳ ತಾಯಿ. ತನ್ನ ದಿಟ್ಟತನ, ಸೌಂದರ್ಯ, ಫ್ಯಾಷನ್ ಹಾಗೂ ತಾಯ್ತನದ ಮೂಲಕ ಜಗತ್ತಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಶ್ರೀಮಾ ಆದಿತ್ಯ ರೈ ಅವರು ನಿಟ್ಟೆಗುತ್ತು ವಿಶಾಲಿ ಹಾಗೂ ಬೆಳ್ಳಿಪ್ಪಾಡಿ ನೇಮಿರಾಜ್ ರೈ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net