ಪ್ರಿಯಕರನಿಗಾಗಿ ಪಾಕ್​ಗೆ ತೆರಳಿದ ಅಂಜು; ಭಾರತಕ್ಕೆ ಮರಳಲು ಸಜ್ಜಾದ ಫಾತಿಮಾ

Anju Fathima
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಪ್ರೇಮಕಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸದ್ದು ಮಾಡಿತ್ತು. ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದ ಸೀಮಾ ಹೈದರ್​ ಭಾರತಕ್ಕೆ ಬಂದ ಬಳಿಕ ಅನೇಕ ಘಟನೆಗಳು ನಡೆದಿವೆ.

ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು  ತನ್ನ ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಅಂಜು, ನಸ್ರುಲ್ಲಾ ಜೊತೆ ಮದುವೆಯಾಗಿದ್ದಳು. ಬಳಿಕ ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿ ಬದಲಾಗಿದ್ದಳು. ಇದೀಗ ಇದೇ ಅಂಜು ಭಾರತಕ್ಕೆ ಮರಳಲು ಪಾಕಿಸ್ತಾನ ಸರ್ಕಾರದ ನಿರಪೇಕ್ಷಣಾ ಪತ್ರ(NOC)ಕ್ಕಾಗಿ ಕಾಯುತ್ತಿದ್ದಾಳೆ.

Anju Fathima

ಈ ಕುರಿತು ಪ್ರತಿಕ್ರಿಯಿಸಿರುವ ಅಂಜು ಫಾತಿಮಾ ಪತಿ ನಸ್ರುಲ್ಲಾ, ಪಾಕಿಸ್ತಾನ ನನ್ನ ಮನೆ ಎಂದು ಬೀಗಿದ ಅಂಜು ದಂಪತಿಗೆ ಪಾಕಿಸ್ತಾನದ ಉದ್ಯಮಿಗಳು ಉಡುಗೊರೆ ನೀಡಿದ್ದರು. ಇದಾದ ಬೆನ್ನಲ್ಲೇ ಅಂಜು ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ತನ್ನ ಮಕ್ಕಳನ್ನು ಬಿಟ್ಟು ಬಂದು ಮಾನಸಿಕವಾಗಿ ನೊಂದಿದ್ದಳು. ಹೀಗಾಗಿ ಭಾರತಕ್ಕೆ ಮರಳುವುದಾಗಿ ಅಂಜು ಹೇಳಿದ್ದಾಳೆ. ಇದೀಗ ಪಾಕಿಸ್ತಾನ ಸರ್ಕಾರ NOC ಪತ್ರಕ್ಕಾಗಿ ಕಾಯುತ್ತಿದ್ದಾಳೆ. ಮಕ್ಕಳನ್ನು ನೋಡುವ ಸಲುವಾಗಿ ಫಾತಿಮಾ ಭಾರತಕ್ಕೆ ಮರಳುತ್ತಿದ್ದಾಳೆ. ಮಕ್ಕಳನ್ನು ನೋಡಿ, ಕೆಲ ದಿನಗಳ ಕಾಲ ಅವರ ಜೊತೆಗೆ ಕಳೆದು ಮತ್ತೆ ಪಾಕಿಸ್ತಾನಕ್ಕೆ ಮರಳುತ್ತಾಳೆ ಎಂದು ಆಕೆಯ ಎರಡ ಪತಿ ನಸ್ರುಲ್ಲಾ ತಿಳಿಸಿದ್ದಾರೆ.

ಅಂಜು ನಡೆಗೆ ಭಾರತದಲ್ಲಿನ ಮೊದಲ ಪತಿ ಹಾಗೂ ಅಂಜು ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂಜುಗೆ ಫೇಸ್‌ಬುಕ್ ಮೂಲಕ ಪಡೆದ ಪ್ರೀತಿಯೇ ದೊಡ್ಡದಾಯಿತು. ಮಕ್ಕಳ ಪ್ರೀತಿ ಕಾಣಲೇ ಇಲ್ಲ. ನನ್ನ ಮಕ್ಕಳು ತಾಯಿಯ ಬರುವಿಕೆಗಾಗಿ ಕಾಯುತ್ತಿದ್ದರು. ಅವರಿಗೆ ಆಗಿರುವ ಮಾನಸಿಕ ಆಘಾತ ಹೇಗೆ ಸರಿಪಡಿಸಲಿ ಎಂದು ಅಂಜು ಮೊದಲ ಪತಿ ಅಳಲು ತೋಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net