More

  ಅಕ್ರಮವಾಗಿ ಜಲಗಡಿ ಪ್ರವೇಶಿಸಿದ ಆರೋಪ; ಭಾರತದ 37 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

  ಕೊಲಂಬೋ: ಸಮುದ್ರದ ಗಡಿಯನ್ನು ಉಲ್ಲಂಘಿಸಿ ಅಕ್ರಮವಾಗಿ ಮೀನುಗಳ ಬೇಟೆಯಾಡಿದ ಆರೋಪದ ಮೇಲೆ ಭಾರತದ 37 ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ಬಂಧಿಸಿರುವುದಾಗಿ ಮೀನುಗಾರಿಕಾ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

  ಶನಿವಾರ ತಡರಾತ್ರಿ ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು 5 ಟ್ರಾಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ತಿಂಗಳೊಂದರಲ್ಲೇ 10 ಟ್ರಾಲಿ ಹಾಗೂ 64 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.

  ಇದನ್ನೂ ಓದಿ: ಭ್ರಷ್ಟರಿಗೆ ಬೆಳಂ ಬೆಳ್ಳಗೆ ಶಾಕ್​ ನೀಡಿದ ಲೋಕಾಯುಕ್ತ; ರಾಜ್ಯದ ಹಲವೆಡೆ ದಾಳಿ

  ಮೀನುಗಾರರ ಬಂಧನದ ಬೆನ್ನಲ್ಲೇ ವಿದೇಶಾಂಗ ಸಚಿವರಿಗೆ ಪತ್ರ ಬರೆದಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ನಿಮಗೆ ತಿಳಿದಿರುವಂತೆ, ನಮ್ಮ ಮೀನುಗಾರರು ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆ ಚಟುವಟಿಕೆಯನ್ನು ಮಾತ್ರ ಅವಲಂಬಿಸಿದ್ದಾರೆ.

  ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳ ಈ ಕೃತ್ಯವು ರಾಜ್ಯದ ಮೀನುಗಾರರ ಮನಸ್ಸಿನಲ್ಲಿ ಭಯವನ್ನು ಹುಟ್ಟು ಹಾಕಿದ್ದು, ಭಾರತದ ಮೀನುಗಾರರನ್ನು ಬಂಧಿಸದಂತೆ ಅಲ್ಲಿನ ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದರು ಸಹ ಶ್ರೀಲಕಾದ ನೌಕಪಡೆ ಅಧಿಕಾರಿಗಳು ನಮ್ಮವರನ್ನು ಬಂಧಿಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನಮ್ಮ ಮೀನುಗಾರರನ್ನು ಬಿಡುಗೊಡೆಗೊಳಿಸಬೇಕು ಎಂದು ತಮ್ಮ ಪತ್ರದಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ಆ ಗ್ರಹಿಸಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts