ಚೀನಾದ ಕಪಿಮುಷ್ಠಿಯಲ್ಲಿ ನೇಪಾಳ- ಭಾರತದ ಟಿ.ವಿ.ಚಾನೆಲ್‌ಗಳು ಬ್ಯಾನ್‌!

TV channel
Published on

ಕಠ್ಮಂಡು: ಚೀನಾದ ತಾಳಕ್ಕೆ ಕುಣಿಯುತ್ತಿರುವ ನೇಪಾಳ ಇದೀಗ ಸಂಪೂರ್ಣ ಚೀನಾದ ಕೈವಶವಾಗಿಯೇ ಬಿಟ್ಟಿದೆ.

ಇತ್ತ ಭಾರತ ಚೀನಾದ ಎಲ್ಲಾ ಆ್ಯಪ್‌ ಸೇರಿದಂತೆ ಬಹುತೇಕ ತನ್ನ ವ್ಯವಹಾರಗಳಿಗೆ ನಿಷೇಧ ಒಡ್ಡಿರುವ ಬೆನ್ನಲ್ಲೇ ಇದೀಗ ನೇಪಾಳದ ಮೂಲಕ ಭಾರತವನ್ನು ಹೆದರಿಸುವ ಪ್ರಯತ್ನಕ್ಕೆ ಕೈಹಾಕಿದೆ. ಸಂಪೂರ್ಣವಾಗಿ ಚೀನಾದ ಬುಟ್ಟಿಗೆ ಬಿದ್ದಿರುವ ನೇಪಾಳ ಕೂಡ ಚೀನಾ ಹೇಳಿದಂತೆಯೇ ಕೇಳತೊಡಗಿದೆ.

ಇದೀಗ ಭಾರತದ ಎಲ್ಲಾ ನ್ಯೂಸ್‌ ಚಾನೆಲ್‌ಗಳನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ. ಕೇಬಲ್‌ ಆಪರೇಟ್‌ಗಳು ಇದಾಗಲೇ ಭಾರತದ ಎಲ್ಲಾ ಚಾನೆಲ್‌ಗಳನ್ನು ಕಿತ್ತು ಹಾಕಿದ್ದಾರೆ. ಆದರೆ ದೂರದರ್ಶನವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

ಮಲ್ಟಿ-ಸಿಸ್ಟಮ್ ಆಪರೇಟರ್‌ಗಳು (ಎಂಎಸ್‌ಒಗಳು) ಡಿಶೋಮ್, ಮೆಗಾ ಮ್ಯಾಕ್ಸ್, ಡಿಎಸ್‌ಎನ್ ಮತ್ತು ಮೈ ಟಿವಿ ಇವುಗಳು ಕೂಡ ಇನ್ನು ಮುಂದೆ ಭಾರತೀಯ ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿಷೇಧಿಸಲಾಗಿದೆ.

ನೇಪಾಳದ ರಾಯಭಾರಿ ನಿಲಾಂಬಾರ್ ಆಚಾರ್ಯ ಅವರು ಚೀನಾದ ರಾಯಭಾರಿ ಹಾಗೂ ಇತರ ಹಿರಿಯ ಮುಖಂಡರ ಜತೆ ಸಭೆ ಸೇರಿದ ನಂತರ ಇಂಥದ್ದೊಂದು ಬೆಳವಣಿಗೆ ಕಂಡುಬಂದಿದೆ. ಭಾರತೀಯ ಮಾಧ್ಯಮಗಳಲ್ಲಿ ತಮ್ಮ ದೇಶಗಳ ವಿರುದ್ಧ ಕೆಲವು ಅವಹೇಳನಕಾರಿ ವಿಷಯಗಳು ಬರುತ್ತಿರುವ ಹಿನ್ನೆಲೆಯಲ್ಲಿ ಚಾನೆಲ್‌ ನಿಷೇಧ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net