

ಚೆನ್ನೈ: ಭಾರತ ತಂಡದ ಆಲ್ರೌಂಡರ್ ವಿಜಯ್‌ಶಂಕರ್ ಬುಧವಾರ ಚೆನ್ನೈನಲ್ಲಿ ಹಣೆಮಣೆ ಏರಿದರು. ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ಎಂಬುವರನ್ನು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವರಿಸಿದರು. ಕೋವಿಡ್-19 ಮಾರ್ಗಸೂಚಿಯಿಂದಾಗಿ ಎರಡು ಕುಟುಂಬಗಳ ಸದಸ್ಯರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಭಾರತದ ಮತ್ತೋರ್ವ ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹವೂ ಇತ್ತೀಚೆಗಷ್ಟೇ ದಂತವೈದ್ಯೆ, ಡ್ಯಾನ್ಸರ್ ಧನಶ್ರೀ ವರ್ಮ ಜತೆ ನಡೆದಿತ್ತು.
ನಾಕೌಟ್ ಹಂತಕ್ಕೆ ಅಲಭ್ಯತೆ ಕುರಿತು ವಿಜಯ್ ಶಂಕರ್ ಈ ಮೊದಲೇ ಟಿಎನ್‌ಸಿಎಗೆ ತಿಳಿಸಿದ್ದರು. ಆದರೆ, ಕರೊನಾ ಮಾರ್ಗಸೂಚಿ ಹಾಗೂ ಕ್ವಾರಂಟೈನ್ ಅವಧಿಯಿಂದಾಗಿ ವಿಜಯ್ ಶಂಕರ್ ಬದಲಿಗೆ ಟಿಎನ್‌ಸಿಎ ಬದಲಿ ಆಟಗಾರರನ್ನು ಪ್ರಕಟಿಸಿರಲಿಲ್ಲ.