More

    ಟೀಮ್ ಇಂಡಿಯಾ ಎದುರು ಸೋತ ಆಸೀಸ್ ತಂಡದಲ್ಲಿ ಬದಲಾವಣೆ..!

    ಸಿಡ್ನಿ: ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದಲ್ಲಿ ತಲ್ಲಣವೇ ಮೂಡಿತ್ತು. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮ್ಯಾಥ್ಯೂ ವೇಡ್ ಅವರನ್ನು ಕೈಬಿಡಲಾಗಿದ್ದು, ಅದೃಷ್ಟಾವಶಾತ್ ನಾಯಕ ಟೀಮ್ ಪೇನ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತ ವಿರುದ್ಧ ಸೋತ ಬಳಿಕ ಪೇನ್ ತಲೆದಂಡ ಖಚಿತ ಎನ್ನಲಾಗಿತ್ತು. ಭಾರತ ವಿರುದ್ಧದ ಸರಣಿಯಲ್ಲಿ ವೇಡ್ ಆಡಿದ 8 ಇನಿಂಗ್ಸ್‌ಗಳಿಂದ ಕೇವಲ 173 ರನ್ ಗಳಿಸಷ್ಟೇ ಶಕ್ತರಾಗಿದ್ದರು.

    ಇದನ್ನೂ ಓದಿ: ಹರಿಯಾಣ ವಿರುದ್ಧ ಬರೋಡ ಗೆಲ್ಲಿಸಿದ ವಿಷ್ಣು ಸೋಲಂಕಿ 

    ಕರೊನಾ ವೈರಸ್ ಭೀತಿಯಿಂದ ಮುಂದೂಡಲ್ಪಟ್ಟಿದ್ದ ಟೂರ್ನಿಯೂ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುವ ಸಾಧ್ಯತೆಗಳಿವೆ. ಆದರೆ, ದ.ಆಫ್ರಿಕಾದಲ್ಲಿರುವ ಕರೊನಾ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ತಂಡ ಪ್ರವಾಸ ಕೈಗೊಳ್ಳಲಿದೆ. ಪೂರ್ವ ನಿಗದಿಯಂತೆ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದು ಆಸ್ಟ್ರೇಲಿಯಾ ತಂಡಕ್ಕೆ ಅನಿವಾರ್ಯವಾಗಿದ್ದು, ಪ್ರವಾಸ ಕೈಗೊಳ್ಳುವ ಸಾದ್ಯತೆ ಹೆಚ್ಚಿದೆ.

    ಇದನ್ನೂ ಓದಿ: ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಮೊದಲ ಪಂದ್ಯಗಳಲ್ಲಿ ಪಿವಿ ಸಿಂಧು, ಕೆ.ಶ್ರೀಕಾಂತ್‌ಗೆ ವೀರೋಚಿತ ಸೋಲು

    ಟೀಮ್ ಪೇನ್ ಆಯ್ಕೆ ಕುರಿತು ಸಮರ್ಥಿಸಿಕೊಂಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೇವೊರ್ ಹೊನ್ಸ್, ಸದ್ಯದ ಪರಿಸ್ಥಿತಿಯಲ್ಲಿ ತಂಡದ ನಾಯಕನ ಸ್ಥಾನಕ್ಕೆ ಪೇನ್ ಸೂಕ್ತ ಆಯ್ಕೆ. 7ನೇ ಕ್ರಮಾಂಕದಲ್ಲಿ ಭಾರತ ವಿರುದ್ಧ ಪೇನ್ ಉತ್ತಮ ನಿರ್ವಹಣೆ ತೋರಿದ್ದರು ಎಂದಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ಫೆ.22 ರಿಂದ ಮಾರ್ಚ್ 7 ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 5 ಪಂದ್ಯಗಳ ಟಿ20 ಸರಣಿ ಆಡಲಿದೆ. ಮ್ಯಾಥ್ಯೂ ವೇಡ್ ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ20 ತಂಡ ಕೂಡಿಕೊಳ್ಳಲಿದ್ದಾರೆ.

    14 ವರ್ಷದ ಬಾಲಕಿಗೆ ಮದ್ಯಪಾನ ಮಾಡಿಸಿ ಸೆಕ್ಸ್​ ಮಾಡಿದ ಫುಟ್​ಬಾಲ್​ ಆಟಗಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts