More

    ಹರಿಯಾಣ ವಿರುದ್ಧ ಬರೋಡ ಗೆಲ್ಲಿಸಿದ ವಿಷ್ಣು ಸೋಲಂಕಿ

    ಅಹಮದಾಬಾದ್: ಸ್ಫೋಟಕ ಬ್ಯಾಟ್ಸ್‌ಮನ್ ವಿಷ್ಣು ಸೋಲಂಕಿ (71*ರನ್, 46 ಎಸೆತ, 4 ಬೌಂಡರಿ, 5 ಸಿಕ್ಸರ್) ಕಡೇ ಓವರ್‌ನಲ್ಲಿ ತೋರಿದ ಸ್ಫೋಟಕ ಬ್ಯಾಟಿಂಗ್ ಫಲವಾಗಿ ಬರೋಡ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಶುಕ್ರವಾರ ನಡೆಯಲಿರುವ ಸೆಮಿಫೈನಲ್ ಕಾದಾಟದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.

    ಇದನ್ನೂ ಓದಿ: ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್, ಪಿವಿ ಸಿಂಧು, ಕೆ.ಶ್ರೀಕಾಂತ್‌ಗೆ ವೀರೋಚಿತ ಸೋಲು

    ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹರಿಯಾಣ ತಂಡ ಹಿಮಾಂಶು ರಾಣಾ (49ರನ್, 40 ಎಸೆತ, 7 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 148 ರನ್ ಕಲೆಹಾಕಿತು. ಪ್ರತಿಯಾಗಿ ಬರೋಡ ತಂಡ ಆರಂಭಿಕ ಆಘಾತದ ನಡುವೆಯೂ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 150 ರನ್ ಗಳಿಸಿ ಗೆಲುವಿನ ನಗೆ ಬೀರಿತು.

    ಹರಿಯಾಣ: 7 ವಿಕೆಟ್‌ಗೆ 148 (ಚೈತನ್ಯ ಬಿಷ್ಣೋಯಿ 21, ಹಿಮಾಂಶು ರಾಣಾ 49, ಶಿವಂ ಚೌಹಾನ್ 35, ಸುಮಿತ್ ಕುಮಾರ್ 20*, ಕಾರ್ತಿಕ್ ಕಾಕಡೆ 7ಕ್ಕೆ 2), ಬರೋಡ: 20 ಓವರ್‌ಗಳಲ್ಲಿ 2 ವಿಕೆಟ್‌ಗೆ 150 (ಕೇದಾರ್ ದೇವಧರ್ 43, ಸುಮಿತ್ ಪಟೇಲ್ 21, ವಿಷ್ಣು ಸೋಲಂಕಿ 71*, ಯಜುವೇಂದ್ರ ಚಾಹಲ್ 15ಕ್ಕೆ 1, ಸುಮಿತ್ ಕುಮಾರ್ 37ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts