ಚಾಮರಾಜನಗರ; ಕರ್ತವ್ಯನಿರತ ಯೋಧ ಹೃದಯಾಘಾತದಿಂದ ಸಾವು

GnanaPrakash
Published on

ಚಾಮರಾಜನಗರ: ಪಂಜಾಬ್ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಯೋಧ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಸುಳ್ವಾಡಿ ಗ್ರಾಮದ ಆಂತೋಣಿಸ್ವಾಮಿ ಹಾಗೂ ಅಂತೋಣಿಯಮ್ಮಲ್ ದಂಪತಿಯ ಪುತ್ರ ಜ್ಞಾನ ಪ್ರಕಾಶ್ (33) ಎಂದು ತಿಳಿದು ಬಂದಿದೆ.

ಕಳೆದ 13 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜ್ಞಾನ ಪ್ರಕಾಶ್ ಇತ್ತೀಚಿಗೆ ಪಂಜಾಬ್​ ಗಡಿಯಲ್ಲಿ ನಿಯೋಜನೆಗೊಂಡಿದ್ದರು. ಶುಕ್ರವಾರ (ಆಗಸ್ಟ್​ 23) ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾದಿಂದ ಮೃತಪಟ್ಟಿದ್ದಾರೆ.

ಮೃತರಿಗೆ ತಂದೆ, ತಾಯಿ, ಹೆಂಡತಿ ಹಾಗೂ ಪುತ್ರರಿದ್ಧಾರೆ ಎಂದು ತಿಳಿದು ಬಂದಿದೆ. ಮೃತರ ಸುದ್ದಿ ತಿಳಿದು ಕುಟುಂಬಸ್ಥರು ಪಂಜಾಬ್‌ಗೆ ತೆರಳಿದ್ದಾರೆ. ಯೋಧರ ಮೃತ ದೇಹ ಶನಿವಾರ ಸ್ವಗ್ರಾಮಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net