ಲೋಕಸಭಾ ಚುನಾವಣೆ ನಡುವೆ ಭಾರತದಲ್ಲೇ ಸಂಪೂರ್ಣ ಐಪಿಎಲ್​ ಆಯೋಜಿಸಲು ಬಿಸಿಸಿಐ ವಿಶೇಷ ಯೋಜನೆ

ipl election web
Published on

ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಯ ನಡುವೆಯೂ, ಐಪಿಎಲ್​ 17ನೇ ಆವೃತ್ತಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ಆಯೋಜಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿರದಿದ್ದರೂ, ಏಪ್ರಿಲ್​&ಮೇನಲ್ಲೇ ನಡೆಯುವುದು ಖಚಿತ. ಈ ನಡುವೆ ಐಪಿಎಲ್​ ಟೂರ್ನಿಯನ್ನು ಮಾರ್ಚ್​ 22ರಂದೇ ಆರಂಭಿಸಲು ಬಿಸಿಸಿಐ ಚಿಂತಿಸಿದೆ. ಟೂರ್ನಿಯನ್ನು ಸ್ಥಳಾಂತರಿಸುವ ಯಾವ ಯೋಚನೆಯೂ ಬಿಸಿಸಿಐಗೆ ಇಲ್ಲ. ಆದರೆ ಕೆಲ ರಾಜ್ಯ ಸರ್ಕಾರಗಳು, ಭದ್ರತಾ ಕಾರಣ ನೀಡಿ ಪಂದ್ಯಗಳ ಆತಿಥ್ಯಕ್ಕೆ ನಿರಾಕರಿಸಿದರೆ ಆಗ ಬೇರೆ ತಾಣ ಅಥವಾ ರಾಜ್ಯಗಳಿಗೆ ಆ ಪಂದ್ಯಗಳನ್ನು ಸ್ಥಳಾಂತರಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ.

ಇತ್ತೀಚೆಗೆ ಆಟಗಾರರ ಹರಾಜಿನಲ್ಲಿ ಹೆಚ್ಚಿನ ಫ್ರಾಂಚೈಸಿಗಳು, ಕೆಲ ಸ್ಟಾರ್​ ವೇಗಿಗಳನ್ನು ದುಬಾರಿ ಮೊತ್ತಕ್ಕೆ ಖರೀದಿಸಿದಾಗ ಈ ಸಲದ ಐಪಿಎಲ್​ ಟೂರ್ನಿಯು ವೇಗದ ಬೌಲಿಂಗ್​ ಸ್ನೇಹಿ ವಿದೇಶಿ ಪಿಚ್​ಗಳಲ್ಲಿ ನಡೆಯಲಿದೆಯೇ ಎಂಬ ಅನುಮಾನ ಮೂಡಿತ್ತು.

ಈ ಹಿಂದೆ 2009ರಲ್ಲಿ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಸಂಪೂರ್ಣ ಐಪಿಎಲ್​ ಟೂರ್ನಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದರೆ, 2014ರಲ್ಲಿ ಭಾಗಶಃ ಟೂರ್ನಿ ಯುಎಇಯಲ್ಲಿ ನಡೆದಿತ್ತು. ಆದರೆ 2019ರಲ್ಲಿ ಮಾತ್ರ ಚುನಾವಣೆಯ ನಡುವೆಯೂ ಸಂಪೂರ್ಣ ಟೂರ್ನಿ ಭಾರತದಲ್ಲೇ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net