ನಾನು ರಾಮಭಕ್ತ ಎಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಕೇಶವ್​ ಮಹಾರಾಜ್​!

ram sia ram web
Published on

ಕೇಪ್​ಟೌನ್​: ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್​ ಕೇಶವ್​ ಮಹಾರಾಜ್​ ಇತ್ತೀಚೆಗೆ ಭಾರತ ವಿರುದ್ಧದ ಕ್ರಿಕೆಟ್​ ಸರಣಿಯಲ್ಲಿ ಬ್ಯಾಟಿಂಗ್​ಗೆ ಬಂದಾಗಲೆಲ್ಲ ಮೈದಾನದ ಡಿಜೆ, "ರಾಮ್​ ಸಿಯಾ ರಾಮ್​' ಹಾಡು ಮೊಳಗಿಸುತ್ತಿದ್ದರು. ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿರುವ ಕೇಶವ್​ ಮಹಾರಾಜ್​, "ನಾನು ಹನುಮಂತ ಮತ್ತು ರಾಮ ದೇವರ ಭಕ್ತ. ಹೀಗಾಗಿ ನಾನು ಮೈದಾನ ಪ್ರವೇಶಿಸುವ ವೇಳೆ ಆ ಹಾಡು ಹಾಕುವಂತೆ ಡಿಜೆಯನ್ನು ವಿನಂತಿಸಿಕೊಂಡಿದ್ದೆ' ಎಂದು ಹೇಳಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಏಕೈಕ ಹಿಂದು ಕ್ರಿಕೆಟಿಗರಾಗಿರುವ ಕೇಶವ್​ ಮಹಾರಾಜ್​, ಬ್ಯಾಟ್​ ಮೇಲೆ "ಓಂ' ಸ್ಟಿಕ್ಕರ್​ ಅಂಟಿಸಿಕೊಂಡಿದ್ದಾರೆ.

ಕೇಪ್​ಟೌನ್​ ಟೆಸ್ಟ್​ನಲ್ಲಿ ಕೇಶವ್​ ಬ್ಯಾಟಿಂಗ್​ಗೆ ಬಂದ ಸಮಯದಲ್ಲಿ "ರಾಮ್​ ಸಿಯಾ ರಾಮ್​' ಹಾಡು ಮೊಳಗಿದಾಗ ವಿರಾಟ್​ ಕೊಹ್ಲಿ, ರಾಮನಂತೆ ಬಿಲ್ಲುಬಾಣ ಹಿಡಿದ ಪೋಸು ನೀಡಿ ಗಮನಸೆಳೆದಿದ್ದರು. ಕನ್ನಡಿಗ ಹಾಗೂ ವಿಕೆಟ್​ ಕೀಪರ್​ ಕೆಎಲ್​ ರಾಹುಲ್​, "ನೀನು ಬಂದಾಗಲೆಲ್ಲಾ ಈ ಹಾಡು ಮೊಳಗುತ್ತದಲ್ಲ?' ಎಂದು ಕೇಶವ್​ ಬಳಿಯೇ ಪ್ರಶ್ನಿಸಿದ್ದು ಕೂಡ ಸುದ್ದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net