ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಸ್ಟಾರ್​ ಬೌಲರ್​: ಕನ್ನಡಿಗನ ಮದುವೆಯಲ್ಲಿ ಕ್ರಿಕೆಟಿಗರು ಫುಲ್​ ಮಿಂಚಿಂಗ್​​

prasiddha krishna
Published on

ದೆಹಲಿ: ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್​ ಬೌಲರ್ ಪ್ರಸಿದ್ಧ್ ಕೃಷ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಚನಾ ಜತೆ ಜೂನ್​ 6ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ರಚನಾ ಕಂಪ್ಯೂಟರ್ ಸೈನ್ ಇಂಜಿನಿಯರ್ ಆಗಿದ್ದು, ಅಮೇರಿಕಾದ ಟೆಕ್ಸಾಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಮೂಲದ ಪ್ರಸಿದ್ಧ್ ಕೃಷ್ಣ, ರಚನಾಳನ್ನು ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯಲ್ಲಿ ಗುರುವಾರದಂದು ಮದುವೆಯಾಗಿದ್ದಾರೆ. ಇನ್ನು, ಜಸ್ಟೀತ್ ಬುಮ್ರಾ, ಶ್ರೇಯಸ್ ಅಯ್ಯರ್, ದೇವದತ್​ ಪಡಿಕ್ಕಲ್, ಮಾಯಂಕ್​ ಅಗರ್​ವಾಲ್​ ಸೇರಿದಂತೆ ಭಾರತ ತಂಡದ ಸಹ ಆಟಗಾರರು ಹಾಗೂ ಅನೇಕ ಗಣ್ಯರು ಮದುವೆಗೆ ಆಗಮಿಸಿದ್ದರು.

2022ರ ಆಗಸ್ಟ್​​​ನಲ್ಲಿ ಭಾರತ-ಜಿಂಬಾಬ್ವೆ ಏಕದಿನ ಪ್ರವಾಸದ ನಂತರ ಕೃಷ್ಣ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಕರ್ನಾಟಕ ಮೂಲದ ವೇಗಿ ಶಸ್ತ್ರ ಚಿಕಿತ್ಸೆಯಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದು, 2023ರ ವಿಶ್ವಕಪ್‌ಗೂ ಮುನ್ನ ತಂಡಕ್ಕೆ ಮರಳಲು ಯತ್ನಿಸುತ್ತಿದ್ದಾರೆ. ಭಾರತ ಕ್ರಿಕೆಟ್​ ತಂಡವನ್ನು ಪ್ರತಿನಿಧಿಸುವ ಪ್ರಸಿದ್ಧ್​​ ಕೃಷ್ಣಾ ಬಲಗೈ ವೇಗಿಯಾಗಿದ್ದು, 14 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 25 ವಿಕೆಟ್​​ ಪಡೆದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net