ದುಬೈ ಏರ್​ಪೋರ್ಟ್​ನಲ್ಲಿ ಭಾರತೀಯನ ಮೊಬೈಲ್ ಕಳವು; ಪತ್ತೆ ಮಾಡಿ ಚೆನ್ನೈಗೆ ಮೊಬೈಲ್ ಕಳುಹಿಸಿದ ಪೊಲೀಸರು; ದುಬೈ ಅಷ್ಟೊಂದು ಸುರಕ್ಷಿತ ದೇಶವಾ?| Dubai police

Madan Gowri
Published on

Dubai police: ದುಬೈ ವಿಮಾನ ನಿಲ್ದಾಣದಲ್ಲಿ ಭಾರತದ ತಮಿಳುನಾಡು ಮೂಲದ ಯುಟ್ಯೂಬರ್ ಮದನ್ ಗೌರಿ ಮೊಬೈಲ್ ಕಳೆದುಕೊಂಡಿದ್ದು, ಅವರು ಭಾರತಕ್ಕೆ ಮುಟ್ಟುತ್ತಲೇ ಅದನ್ನು ಪತ್ತೆ ಮಾಡಿ ವಾಪಸ್ ಚೆನ್ನೈಗೆ ದುಬೈ ಪೊಲೀಸರು ಕಳಿಸಿದ್ದಾರೆ. ಅದಕ್ಕೆ ಯೂಟ್ಯೂರ್ ದುಬೈ ಪೊಲೀಸರಿಗೆ ಮತ್ತು ಎಮಿರೈಟ್ಸ್​ಗೆ ಧನ್ಯವಾದ ಹೇಳಿದ್ದಾರೆ. ಜೊತೆಗೆ ದುಬೈ ಎಷ್ಟು ಸುರಕ್ಷಿತ ದೇಶ ಎಂದು ಹೊಗಳಿದ್ದಾರೆ.

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಮದನ್​ ಗೌರಿ ಮೊಬೈಲ್ ಹಿಂತಿರುಗಿಸಿದ್ದಕ್ಕಾಗಿ ದುಬೈ ಪೊಲೀಸರು ಮತ್ತು ಎಮಿರೈಟ್ಸ್​ಗ ಕೃತಜ್ಞತೆ ಸಲ್ಲಿಸುವ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಅದಕ್ಕೆ ಅನೇಕ ಜನ  ದುಬೈ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯನ್ನು ಹೊಗಳಿ ಕಮೆಂಟ್ ಮಾಡ್ತಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಮದನ್ ಗೌರಿ, ಒಂದು ವಾರದ ಹಿಂದೆ ದುಬೈ ಏರ್​ಪೋರ್ಟ್​ನಲ್ಲೊ ನನ್ನ ಫೋನ್ ಕಳೆದುಹೋಗಿತ್ತು. ಮತ್ತು ಎಮಿರೇಟ್ಸ್ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಅವರು ಫೋನ್‌ನ ವಿವರಗಳನ್ನು ಇಮೇಲ್ ಮಾಡಲು ಕೇಳಿಕೊಂಡರು. ನಾನು ಚೆನ್ನೈಗೆ ಹಿಂತಿರುಗಿದಾಗ ನನ್ನ ಮೊಬೈಲ್ ಪತ್ತೆಯಾಗಿದೆ ಎನ್ನುವ ಇಮೇಲ್ ಬಂದಿತು. ನಂತರ ದುಬೈ ಪೊಲೀಸರು ಮುಂದಿನ ಲಭ್ಯವಿರುವ ವಿಮಾನದಲ್ಲಿ ಅದನ್ನು ಚೆನ್ನೈಗೆ ಉಚಿತವಾಗಿ ಕಳುಹಿಸಲು ವ್ಯವಸ್ಥೆ ಮಾಡಿದರು ಎಂದು ಹೇಳಿದ್ದಾರೆ.

ವಿಡಿಯೋ ಕೆಳೆಗೆ ಅನೇಕರು ದುಬೈ ನಗರವನ್ನು ಮತ್ತು ಅದು ಎಷ್ಟು ಸುರಕ್ಷಿತವಾಗಿದೆ ಎಂದು ಶ್ಲಾಘಿಸಿದ್ದಾರೆ. ಒಬ್ಬರು "ದುಬೈ ವಿಶ್ವದ ಅತ್ಯಂತ ಸುರಕ್ಷಿತ ದೇಶ" ಎಂದು ಬರೆದಿದ್ದಾರೆ. ಮತ್ತೊಬ್ಬರು, ಒಮ್ಮೆ ತಮ್ಮ ಲ್ಯಾಪ್‌ಟಾಪ್ ಬ್ಯಾಗ್ ಕಳೆದುಕೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ, ದುಬೈನಿಂದ ಚೆನ್ನೈಗೆ ಹೋಗುವಾಗ T3 ಟರ್ಮಿನಲ್‌ನಲ್ಲಿ ನನ್ನ ಲ್ಯಾಪ್‌ಟಾಪ್ ಬ್ಯಾಗ್ ಕಳೆದುಕೊಂಡೆ. ನಾನು ಇಮೇಲ್ ಮೂಲಕ ದೂರು ನೀಡಿದ್ದೆ, 3 ದಿನಗಳಲ್ಲಿ ನಾನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಅನ್ನು ಮರಳಿ ಪಡೆದುಕೊಂಡೆ, ದುಬೈ ವಿಮಾನ ನಿಲ್ದಾಣ ಮತ್ತು ಎಮಿರೇಟ್ಸ್‌ನ ಸೇವೆಯ ಗುಣಮಟ್ಟವನ್ನು ನೀವು ಸೋಲಿಸಲು ಸಾಧ್ಯವಿಲ್ಲ" ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net