

ಫ್ರಾಂಕ್ಫ್ರುಟ್: ಜರ್ಮನಿಯ ಫ್ರಾಂಕ್ಫ್ರುಟ್ನಲ್ಲಿ ಪಾಕಿಸ್ತಾನೀಯರು ಭಾರತ ಮತ್ತು ಭಾರತ ಪ್ರಧಾನಿ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ ವೇಳೆ ಭಾರತೀಯರೊಬ್ಬರು ಒಂಟಿಯಾಗಿ ಪ್ರತಿರೋಧ ತೋರಿದ ಬಗೆ ಇದು.
ಕೆಂಪು ಕ್ಯಾಪ್ ಧರಿಸಿ ಭಾರತದ ಎರಡು ಪುಟ್ಟ ಬಾವುಟಗಳನ್ನು ಕೈಯಲ್ಲಿ ಹಿಡಿದು ಬೀಸುತ್ತಾ, ಬಾಪ್ ಬಾಪ್ ಹೋತಾ ಹೇ, ಬೇಟಾ ಬೇಟಾ ಹೋತಾ ಹೇ.. ಎಂದು ಪ್ರತಿಭಟನೆಗೆ ಪ್ರತಿರೋಧ ತೋರುತ್ತ ಸೆಲ್ಫಿ ವಿಡಿಯೋ ಮಾಡಿ ಅದನ್ನು ಟ್ವಿಟರ್ಗೆ ಅಪ್ಲೋಡ್ ಮಾಡಿದ್ದಾರೆ. ನಾಚಿಕೆಗೆಟ್ಟ ಪಾಕಿಸ್ತಾನೀಯರು ಫ್ರಾಂಕ್ಫ್ರುಟ್ನಲ್ಲಿ ನಮ್ಮ ಹೆಮ್ಮೆಯ ದೇಶವನ್ನು ಮತ್ತು ಪ್ರಧಾನಿಯನ್ನು ಖಂಡಿಸುತ್ತ ಪ್ರತಿಭಟನೆ ನಡೆಸಿದ್ದರು. ಅವರ ಅತಿಕ್ರಮಣಕಾರಿ ನಿಲುವನ್ನು ನಾನು ಒಂಟಿಯಾಗಿ ನಿಂತು ಎದುರಿಸಿದೆ ಎಂಬ ಸಂದೇಶವನ್ನೂ ಅದರಲ್ಲಿ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಗುರು: ಡಿಜೆ ಹಳ್ಳಿ ಗಲಭೆ, ಅನೇಕ ಪ್ರಶ್ನೆಗಳು!
ಅವರ ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆರೂವರೆ ಸಾವಿರ ಬಾರಿ ಅವರ ಈ ಟ್ವೀಟ್ ರೀಟ್ವೀಟ್ ಆಗಿದ್ದು, 16 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿವೆ. ಅಂದ ಹಾಗೆ, ಈ ರೀತಿ ಪ್ರತಿರೋಧ ತೋರಿದ ಹೆಮ್ಮೆಯ ಭಾರತೀಯನ ಹೆಸರು ಪ್ರಶಾಂತ್ ವೇನ್ಗುರ್ಲೇಕರ್(@vengurlekarpras).