

ನವದೆಹಲಿ: ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಕಳೆದ ಜೂನ್ 15ರಂದು ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ಓರ್ವ ಕಮಾಂಡಿಂಗ್ ಅಧಿಕಾರಿ ಸೇರಿ 20 ಯೋಧರ ನೆನಪಿಗಾಗಿ ಲಡಾಖ್ನಲ್ಲಿ ಯುದ್ಧ ಸ್ಮಾರಕ ನಿರ್ವಿುಸಲಾಗಿದೆ.
ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿಯ ಕೆಎಂ-120 ಪೋಸ್ಟ್ ಬಳಿ ಸ್ಮಾರಕ ನಿರ್ವಿುಸಲಾಗಿದ್ದು, ಇದರಲ್ಲಿ ಹುತಾತ್ಮರಾದ ಯೋಧರ ಹೆಸರುಗಳು ಹಾಗೂ ಜೂ.15ರಂದು ನಡೆದ ಘರ್ಷಣೆಯ ವಿವರಗಳನ್ನು ಉಲ್ಲೇಖಿಸಲಾಗಿದೆ.
‘2020ರ ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಕಮಾಂಡಿಂಗ್ ಅಧಿಕಾರಿ ಬಿ.ಸಂತೋಷ್ ಬಾಬು ನೇತೃತ್ವದ ತಂಡ ಎವೈ ನಾಲಾದಿಂದ ಚೀನಾದ ಪಡೆಯನ್ನು ಹಿಂದೆ ಸರಿಸಲು ತಮಗೆ ವಹಿಸಿದ್ದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಬಳಿಕ ಪಿಪಿ 14ಗೆ ತೆರಳಿದಾಗ ಭಾರತೀಯ ಸೈನಿಕರು ಹಾಗೂ ಚೀನಾ ಸೈನಿಕರ ಮಧ್ಯೆ ಟೆಂಟ್ವೊಂದರ ಸಂಬಂಧ ಘರ್ಷಣೆ ನಡೆಯಿತು. ಆಗ ಚೀನಾದ ಸೈನ್ಯಕ್ಕೆ ಭಾರಿ ಪ್ರಮಾಣದಲ್ಲಿ ಸಾವು-ನೋವು ಉಂಟುಮಾಡಿದ ಭಾರತೀಯ ಪಡೆಯಲ್ಲಿನ ಕಮಾಂಡಿಂಗ್ ಆಫೀಸರ್ ಸೇರಿದಂತೆ 20 ಯೋಧರು ಹುತಾತ್ಮರಾದರು’ ಎಂದು ಸ್ಮಾರಕದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್)