

ನವದೆಹಲಿ: ಕರೊನಾ ವೈರಸ್ Covid19 ಸೋಂಕು ಹರಡುವುದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಇದಕ್ಕೆ ಪೂರಕವಾಗಿ ಸಾರ್ವಜನಿಕರು ಕೂಡ ತಮ್ಮದೇ ಆದ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಅವುಗಳ ವಿವರಗಳನ್ನು ಟ್ವಿಟರ್ನಲ್ಲಿ ಅಪ್ಡೇಟ್ ಮಾಡಿದ್ದಾರೆ, ಮಾಡುತ್ತಿದ್ದಾರೆ ಕೂಡಾ.
ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ನಲ್ಲಿ ಇಂಥ ಟ್ವೀಟ್ಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ, ಅವುಗಳನ್ನು ಪ್ರಶಂಸಿಸುವ ಮೂಲಕ ಇನ್ನಷ್ಟು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಟ್ರೆಂಡ್ಗೆ ಅವರು #IndiaFightsCorona ಎಂಬ ಹ್ಯಾಷ್ ಟ್ಯಾಗ್ ಕೂಡ ಕೊಟ್ಟಿದ್ದಾರೆ.
ಸ್ವಲ್ಪ ಹೊತ್ತು ಮುಂಚೆ ಮಾಡಿದ ದಿನದ ಮೊದಲ ಟ್ವೀಟ್ನಲ್ಲಿ ಅವರು, ಭಾರತ ಹೇಗೆ ಕೋವಿಡ್ 19 ವಿರುದ್ಧ ಹೋರಾಡುತ್ತಿದೆ ಎಂಬುದನ್ನು ಅನೇಕರು ಹೈಲೈಟ್ ಮಾಡುತ್ತಿದ್ದಾರೆ. ಈ ನಡವಳಿಕೆ ಖಚಿತವಾಗಿಯೂ ಈ ಸೋಂಕು ಹರಡದಂತೆ ಕೆಲಸ ಮಾಡುತ್ತಿರುವ ಡಾಕ್ಟರ್ಗಳು, ನರ್ಸ್ಗಳು, ಪೌರ ಕಾರ್ಮಿಕರು, ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಕೋವಿಡ್ 19 ವಿರುದ್ಧ ಮುಂಚೂಣಿಯಲ್ಲಿದ್ದು ಹೋರಾಡುವ ಅನೇಕರ ನೈತಿಕ ಸ್ಥೈರ್ಯವನ್ನು ಹೆಚ್ಚುಮಾಡುತ್ತದೆ ಎಂದು ಪ್ರಧಾನಿ ಬರೆದುಕೊಂಡಿದ್ದಾರೆ.
ನಂತರದ ಟ್ವೀಟ್ಗಳಲ್ಲಿ ಅನೇಕ ಮುಂಜಾಗ್ರತಾ ಕ್ರಮಗಳ ಟ್ವೀಟ್ಗಳನ್ನು ಮರುಟ್ವೀಟ್ ಮಾಡಿ ಇತರರೂ ಅನುಸರಿಸುವಂತೆ ಪ್ರೇರೇಪಿಸಿದ್ದಾರೆ. ಅವುಗಳ ವಿವರ ಇಲ್ಲಿದೆ..